show blocks helper
  • ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಎರಡೂ ಬಲಗಳು ವಿಭಿನ್ನ ವಸ್ತುಗಳ ಮೇಲೆ ಪ್ರಯೋಗವಾಗುವುದರಿಂದ ಅವುಗಳು ತಟಸ್ಥವಾಗುವುದಿಲ್ಲ. ಆದ್ದರಿಂದ ನ್ಯೂಟನ್ನನ ಮೂರನೇ ನಿಯಮವು ಎರಡು ವಿಭಿನ್ನ ವಸ್ತುಗಳ ನಡುವಿನ ಬಲಗಳ ನಡುವಣ ನಡೆಯುವ ಪರಸ್ಪರ ಕ್ರಿಯೆಯನ್ನು ವಿವರಿಸುತ್ತದೆ.
  • ನ್ಯೂಟನ್ನಿನ ಎರಡನೇ ನಿಯಮದ ಪ್ರಕಾರ, ಒಂದು ಕಾಯಕ್ಕೆ ಅದರ ಮೇಲಿನ ಬಲ ಪ್ರಯೋಗದಿಂದ ನೀಡಿದ ವೇಗೋತ್ಕರ್ಷವು ಕಾಯದ ಮೇಲೆ ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಬಲ ಪ್ರಯೋಗವಾದ ದಿಕ್ಕಿನಲ್ಲಿಯು ಕಾಯದ ರಾಶಿಗೆ ವಿಲೋಮಾನುಪಾತದಲ್ಲಿಯೂ ಇರುತ್ತದೆ. ನ್ಯೂಟನ್ನಿನ ಎರಡನೇ ನಿಯಮವು ಬಲ ಮತ್ತು ವೇಗೋತ್ಕರ್ಷಗಳ ನಡುವಿನ ಸಂಬಂಧವನ್ನು ನಿಖರವಾಗಿ ವಿವರಿಸುತ್ತದೆ.

Go to Top