show blocks helper
  • ರಾಸಾಯನಿಕ ಕ್ರಿಯೆಯಲ್ಲಿ ದ್ರವ್ಯರಾಶಿ ಸಂರಕ್ಷಣ ನಿಯಮವನ್ನು ಪರೀಕ್ಷಿಸುವುದು. ದ್ರವ್ಯರಾಶಿ ಸಂರಕ್ಷಣ ನಿಯಮ ಎಂದರೇನು? ರಾಸಾಯನಿಕ ಕ್ರಿಯೆಯ ಪ್ರಕ್ರಿಯೆಯಲ್ಲಿ ಒಂದು ರೂಪದಲ್ಲಿರುವ ರಾಸಾಯನಿಕಗಳನ್ನು ಇನ್ನೊಂದು ರೂಪದ ರಾಸಾಯನಿಕವಾಗಿ ಬದಲಾವಣೆ ಮಾಡುವಿಕೆ. ಇದರಲ್ಲಿ ಹಲವಾರು ವಿಧಗಳಿವೆ, ಅವುಗಳೆಂದರೆ • ಆಮ್ಲ- ಪ್ರತ್ಯಾಮ್ಲ ಕ್ರಿಯೆಗಳು • ಪ್ರಕ್ಷೇಪ (ಒತ್ತರ)ಕ್ರಿಯೆಗಳು • ಸಂಶ್ಲೇಷಣಾ ಕ್ರಿಯೆಗಳು • ಉತ್ಕರ್ಷಣ-ಅಪಕರ್ಷಣ ಕ್ರಿಯೆಗಳು • ಸ್ಥಾನಪಲ್ಲಟ ಕ್ರಿಯೆಗಳು • ವಿಘಟನಾ ಕ್ರಿಯೆಗಳು
  • ನೀರಿನ ಕುದಿಯುವ ಬಿಂದು ನಿರ್ಧರಿಸುವುದು.
  • ಮಂಜುಗಡ್ಡೆ ಕರಗುವ ಬಿಂದುವನ್ನು ಕಂಡುಹಿಡಿಯುವುದು.
  • ತಯಾರಿಸಲು:
    • ಸಾಮಾನ್ಯ ಉಪ್ಪು, ಸಕ್ಕರೆ ಮತ್ತು ಪಟಿಕಗಳ ನೈಜ ದ್ರಾವಣ
    • ಮಣ್ಣು, ಸೀಮೆ ಸುಣ್ಣದ ಪುಡಿ ಮತ್ತು ಸೂಕ್ಷ್ಮ ಮರಳಿನ ಕಣಗಳಿರುವ ನೀರಿನ ನಿಲಂಬನ.
    • ನೀರಿನಲ್ಲಿರುವ ಪಿಷ್ಟ ಮತ್ತು ನೀರಿನಲ್ಲಿರುವ ಮೊಟ್ಟೆಯ ಅಲ್ಬುಮಿನ್(ಬಿಳಿ ಭಾಗ)ಗಳ ಕಲಿಲ
    ಮೇಲಿನ ದ್ರಾವಣಗಳ ನಡುವೆ ವ್ಯತ್ಯಾಸವನ್ನು ಈ ಆಧಾರದ ಮೇಲೆ ಕಂಡು ಹಿಡಿಯುವುದು.:
    1. ಪಾರದರ್ಶಕತೆ
    2. ಶೋಧಿಸುವಿಕೆಯ ಮಾನದಂಡ
    3. ಸ್ಥಿರತೆ.
  • ಮಿಶ್ರಣ ಮತ್ತು ಸಂಯುಕ್ತಗಳ ನಡುವಿನ ವ್ಯತ್ಯಾಸ

    ನಮ್ಮ ಉದ್ದೇಶ 1. ಮಿಶ್ರಣವನ್ನು ತಯಾರಿಸುವುದು 2. ಸಂಯುಕ್ತ ವಸ್ತುವನ್ನು ತಯಾರಿಸುವುದು ಕಬ್ಬಿಣದ ರಜಗಳು ಮತ್ತು ಗಂಧಕದ ಪುಡಿಯನ್ನು ಉಪಯೋಗಿಸಿ ಮಿಶ್ರಣ ಮತ್ತು ಸಂಯುಕ್ತ ವಸ್ತುವನ್ನು ಈ ಕೆಳಗಿನವುಗಳ ಆಧಾರದ ಮೇಲೆ ಪ್ರತ್ಯೇಕಿಸುವುದು • ಸಮಜ್ಯಾತ ಮತ್ತು ಅಸಮಜ್ಯಾತ ಭೌತಿಕ ಲಕ್ಷಣಗಳು • ಅಯಸ್ಕಾಂತದೊಂದಿಗೆ ವರ್ತನೆ • ಕಾರ್ಬನ್ ಡೈ ಸಲ್ಫೈಡ್ ದ್ರಾವಕದೊಂದಿಗಿನ ವರ್ತನೆ • ಉಷ್ಣತೆಯ ಪರಿಣಾಮ • ದುರ್ಬಲ ಹೈಡ್ರೊಕ್ಲೋರಿನ್ ಆಮ್ಲದೊಂದಿಗೆ ಕಾಯಿಸಿದಾಗ ಉಂಟಾಗುವ ಪರಿಣಾಮ
  • ರಾಸಾಯನಿಕ ಪ್ರತಿಕ್ರಿಯೆಗಳು

    ನಮ್ಮ ಉದ್ದೇಶ

    ಕೆಳಗಿನ ಪ್ರತಿಕ್ರಿಯೆಗಳನ್ನು ಕೈಗೊಳ್ಳುವುದು ಮತ್ತು ಭೌತಿಕ ಅಥವಾ ರಾಸಾಯನಿಕ ಬದಲಾವಣೆಗಳಂತೆ ಅವುಗಳನ್ನು ವರ್ಗೀಕರಿಸುವುದು .
    • ಗಾಳಿಯಲ್ಲಿ ಮೆಗ್ನೀಶಿಯಂ ಉರಿಸುವುದು.
    • ನೀರಿನಲ್ಲಿ ಸೋಡಿಯಂ ಸಲ್ಫೇಟ್ ದ್ರಾವಣದ ಜೊತೆ ಬೇರಿಯಂ ಕ್ಲೋರೈಡ್ ದ್ರಾವಣದ ಪ್ರತಿಕ್ರಿಯೆ.
    • ತಾಮ್ರದ ಸಲ್ಫೇಟ್ ನೀರಿನ ದ್ರಾವಣದೊಂದಿಗೆ ಕಬ್ಬಿಣದ ಮೊಳೆ.
    • ದುರ್ಬಲವಾದ ಸಲ್ಫ್ಯೂರಿಕ್ ಆಮ್ಲದೊಂದಿಗೆ ಸತು.
    • ತಾಮ್ರದ ಸಲ್ಫೇಟ್ ಅನ್ನು ಕಾಯಿಸುವುದು.
  • ಮಿಶ್ರಣದ ಘಟಕಗಳನ್ನು ಕೆಳಕಂಡ ವಿಧಾನಗಳಿಂದ ಬೇರ್ಪಡಿಸಬಹುದು.
    • ಬೇರ್ಪಡಿಸುವ ಆಲಿಕೆ
    • ವರ್ಣ ರೇಖನ
    • ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆ
    •  ಸರಳ ಭಟ್ಟಿ ಇಳಿಸುವಿಕೆ
    • ಆಂಶಿಕ ಭಟ್ಟಿ ಇಳಿಸುವಿಕೆ
  • ವಿಭವಾಂತರದ ಜೊತೆ ವಿದ್ಯುತ್ಪ್ರವಾಹದ ಅಳತೆಗಳನ್ನು ಗ್ರಾಫ್ ಸಹಾಯದಿಂದ ಬಿಡಿಸಿ ರೋಧದ ಅಳತೆಯನ್ನು  ಸೆಂಟಿಮೀಟರ್ ಳಲ್ಲಿ ಕಂಡುಹಿಡಿಯುವುದು.
  • ಸರಣಿ ವಿದ್ಯುತ್  ಮಂಡಲಗಳೆಂದರೇನು ? ಎಂದು ತಿಳಿಯುವ ಮೊದಲು , ವಿದ್ಯುತ್ ಮಂಡಲಗಳೆಂದರೇನು? ಮತ್ತು ಅವುಗಳ ವಿಧಗಳಾವುವು ? ಎಂದು ತಿಳಿಯುವುದು ಅಗತ್ಯ.
  • ಸ್ಲಿಂಕಿ ( ಹಿಗ್ಗಿಸಿದ ಸ್ಪ್ರಿಂಗ್ ) ನಲ್ಲಿ ಒಂದು ಕಂಪನದ ವೇಗವನ್ನು ಕಂಡುಹಿಡಿಯುವುದು.
  • ಸ್ಪಿಂಗ್ ತ್ರಾಸು ಮತ್ತು ಅಳತೆಯ ಜಾಡಿಯನ್ನು ಉಪಯೋಗಿಸಿ ನೀರಿಗಿಂತ ಹೆಚ್ಚಿನ ಸಾಂದ್ರತೆ ಇರುವ ಘನವಸ್ತುವಿನ ಸಾಂದ್ರತೆಯನ್ನು ಕಂಡು ಹಿಡಿಯುವುದು.
  • ಪ್ರತಿಫಲನ ಎಂದರೇನು? ಒಂದು ಮಾಧ್ಯಮದಲ್ಲಿ ವಸ್ತುವಿನ ಮೇಲೆ ಬಿದ್ದ ತರಂಗವು ಹಿಂತಿರುಗಿ ಅದೇ ಮಾಧ್ಯಮಕ್ಕೆ ಬರುವ ಕ್ರಿಯೆಯನ್ನು ಪ್ರತಿಫಲನ ಎನ್ನುತ್ತೇವೆ. ಉದಾಹರಣೆಗೆ ಬೆಳಕಿನ ಪ್ರತಿಫಲನ, ಶಬ್ದದ ಪ್ರತಿಫಲನ ಮತ್ತು ನೀರಿನ ತರಂಗಗಳ ಪ್ರತಿಫಲನ ನಿಮಗೆ ಗೊತ್ತೆ ಶಬ್ದ ತನ್ನ ಆಕರದಿಂದ ಹೇಗೆ ಪ್ರಸರಣೆಯಾಗುತ್ತದೆ ಎಂದು? ಶಬ್ದವು ಗಾಳಿಯಲ್ಲಿ ನೀಳತರಂಗಗಳಾಗಿ ಪ್ರಸರಣೆಯಾಗುತ್ತದೆ. ಗಾಳಿಯ ಗುಣಲಕ್ಷಣಗಳ ಮೂಲಕ ಶಬ್ದದ ಜವವನ್ನು ಕಂಡುಹಿಡಿಯಬಹುದು ಹೊರತಾಗಿ ಶಬ್ದದ ಆವೃತ್ತಿ ಅಥವಾ ಕಂಪನ ವಿಸ್ತಾರದಿಂದಲ್ಲ. ಒಂದು ಮೇಲ್ಮೈಗೆ ತಾಗಿದ ಶಬ್ದತರಂಗವು ಹೀರದೆ ಅಥವಾ ಚಲಿಸದೆ ಇದ್ದರೆ ಅದು ಪ್ರತಿಫಲನ ಹೊಂದುತ್ತದೆ. ಶಬ್ದ ಪ್ರತಿಫಲನದ ನಿಯಮವು ಬೆಳಕಿನ ಪ್ರತಿಫಲನ ನಿಯಮದ ರೀತಿಯೇ ಇದೆ, ಅಂದರೆ ಫಲಿತ ಕೋನದ ಅಳತೆಯು ಪ್ರತಿಫಲನ ಕೋನದ ಅಳತೆಗೆ ಸಮವಿರುತ್ತದೆ. ದರ್ಪಣದಲ್ಲಿ ಹೇಗೆ ಪಾರ್ಶ್ವಪಲ್ಲಟ ಕ್ರಿಯೆ ನಡೆಯುತ್ತದೆಯೋ ಹಾಗೆ. ಹೇಗೆ ಶಬ್ದ ಪ್ರತಿಫಲನವನ್ನು ವಿವರಿಸಬಹುದು? ಮಾಧ್ಯಮದಲ್ಲಿ ಚಲಿಸುತ್ತಿರುವ ಶಬ್ದ ತರಂಗಗಳು, ಮೇಲ್ಮೈಗೆ ತಾಗಿ ಮತ್ತು ಅದೇ ಮಾಧ್ಯಮದಿಂದ ಹಿಂತಿರುಗಿ ಬರುವ ಕ್ರಿಯೆಗೆ ಶಬ್ದತರಂಗದ ಪ್ರತಿಫಲನ ಎನ್ನುತ್ತೇವೆ. ಆ ತರಂಗಗಳನ್ನು ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎನ್ನುತ್ತೇವೆ. ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎಂದರೇನು? ಪ್ರತಿಫಲಕದ ಕಡೆಗೆ ಚಲಿಸುವ ಶಬ್ದ ತರಂಗಗಳನ್ನು ಆಪಾತ/ಪತನ ಶಬ್ದ ತರಂಗಗಳು ಎನ್ನುವರು. ಪ್ರತಿಫಲಕದಿಂದ ಹಿಂದಿರುವ ಶಬ್ದ ತರಂಗಗಳನ್ನು ಪ್ರತಿಫಲಿತ ಶಬ್ದ ತರಂಗಗಳು ಎನ್ನುವರು. ಪ್ರಾಯೋಗಿಕವಾಗಿ ಆಪಾತ ಬಿಂದು ಮತ್ತು ಪ್ರತಿಫಲಿತ ಬಿಂದು ಪ್ರತಿಫಲನ ಮೇಲ್ಮೈ ಮೇಲೆ ಒಂದೇ ಆಗಿರುತ್ತದೆ. ಪತನ ಬಿಂದುವಿನಲ್ಲಿ ಎಳೆದ ಲಂಬವನ್ನು ಲಂಬ ಎನ್ನುವರು.ಶಬ್ದ ತರಂಗವು ಲಂಬದಲ್ಲಿ ಉಂಟುಮಾಡಿದ ಕೋನವನ್ನು ಆಪಾತ ಕೋನ ಎನ್ನುವರು. “i” ಲಂಬದಿಂದ ಪ್ರತಿಫಲನಗೊಂಡ ಶಬ್ದತರಂಗದ ಕೋನವನ್ನು ಪ್ರತಿಫಲನ ಕೋನ “r” ಎನ್ನುವರು. ಫ್ರತಿಫಲನದ ನಿಯಮಗಳು ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ. ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ. ಕಲಿವಿನ ಫಲಗಳು : ವಿದ್ಯಾರ್ಥಿಗಳು ಶಬ್ದ ತರಂಗದ ಮೊದಲನೆ ಮತ್ತು ಎರಡನೆ ಪ್ರತಿಫಲನದ ನಿಯಮಗಳನ್ನು ತಿಳಿಯುತ್ತಾರೆ. ಪ್ರತಿಫಲನದ ಮೊದಲನೆಯ ನಿಯಮ : ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ. ಪ್ರತಿಫಲನದ ಎರಡನೆಯ : ನಿಯಮ ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ.
  • ಈ ಕೆಳಕಂಡ ದ್ರಾವಣಗಳಲ್ಲಿ ಒಂದು ಘನ ವಸ್ತುವನ್ನು ಸಂಪೂರ್ಣವಾಗಿ ಮುಳುಗಿಸಿದಾಗ ಘನವು ಕಳೆದುಕೊಳ್ಳುವ ತೂಕಕ್ಕೂ ಮತ್ತು ಪಲ್ಲಟವಾಗುವ ನೀರಿನ ತೂಕಕ್ಕೂ ಇರುವ ಸಂಬಂಧವನ್ನು ಸ್ಥಾಪಿಸುವುದು.
    • ನಲ್ಲಿ ನೀರು
    • ಪ್ರಬಲ ಉಪ್ಪಿನ ದ್ರಾವಣ
    ಕನಿಷ್ಠ ಎರಡು ಘನ ವಸ್ತುಗಳನ್ನು ಬಳಸಿ ಇದನ್ನು ಸಾಧಿಸಬಹುದು.
  • ಒಂದು ಕಬ್ಬಿಣದ ಆಯತಘನವು ಮರಳಿನ ಮೇಲೆ ಉಂಟುಮಾಡುವ ಒತ್ತಡವನ್ನು ಅಧ್ಯಯನ ಹಾಗೂ ಹೋಲಿಕೆ ಮಾಡಲು ಅದರ ದ್ರವ್ಯರಾಶಿ ಮತ್ತು ತೂಕವನ್ನು ಕಂಡುಹಿಡಿಯಬೇಕು. ನೀವು ಒಂದು ವಸ್ತುವಿನ ದ್ರವ್ಯರಾಶಿಯನ್ನು ವ್ಯಾಖ್ಯಾನಿಸಬಲ್ಲರೇ ? ಒಂದು ವಸ್ತುವಿನ ದ್ರವ್ಯರಾಶಿಯು ಆ ವಸ್ತುವಿನ ಮೂಲಭೂತ ಗುಣವಾಗಿದೆ. ಆ ವಸ್ತುವಿನ ಜಡತ್ವವನ್ನು ಅಳತೆ ಮಾಡುವ ಅಂಕಿಯಾಗಿದೆ. ಆ ವಸ್ತುವಿನಲ್ಲಿರುವ ಒಟ್ಟು ದ್ರವ್ಯದ ಮೂಲಭೂತ ಅಳತೆಯಾಗಿದೆ. ದ್ರವ್ಯರಾಶಿಯ ಸಾಮಾನ್ಯ ಸಂಕೇತ ‘m’ ಮತ್ತು ಅದರ ಅಂತರಾಷ್ಟ್ರೀಯ ಏಕಮಾನ ಕಿಲೋಗ್ರಾಂಗಳು. ಪ್ರತಿನಿತ್ಯದ ಬಳಕೆಯಲ್ಲಿ ದ್ರವ್ಯರಾಶಿಯನ್ನು ತೂಕವೆಂದೂ, ಅವುಗಳ ಏಕಮಾನಗಳನ್ನು ಕಿಲೊಗ್ರಾಂಗಳೆಂದು ಪರಿಗಣಿಸುತ್ತೇವೆ. ವೈಜ್ಞಾನಿಕವಾಗಿ ತೂಕವನ್ನು ಯಾವುದೇ ವಸ್ತುವಿನಮೇಲೆ ವರ್ತಿಸುತ್ತಿರುವ ಗುರುತ್ವಾಕರ್ಷಣಾಬಲ ಎಂದು ವ್ಯಾಖ್ಯಾನಿಸಬಹುದು. ಆದರೆ ದ್ರವ್ಯರಾಶಿಯು ವಸ್ತುವಿನ ಸಹಜ ಗುಣವಾಗಿರುತ್ತದೆ.

Go to Top