show blocks helper
  • ದಿನವೂ ಉದಯೋನ್ಮುಖ ಕವಿಗಳು ಮತ್ತು ವಿಮರ್ಶಕರು ಮನೆಗೆ ಬರುತ್ತಿದ್ದರು. ತಾವೇ ಎಲಿಯೆಟ್‌ಗಳು ಅನ್ನೋ ಹಾಗೆ ಮಾತಾಡುತ್ತಿದ್ದರು. ನಂಗೆ ಬೌದ್ಧಿಕತೆಯ ಬಗ್ಗೆ ಜ್ಞಾನದ ಬಗ್ಗೆ ಮೋಹವಿತ್ತು.
  • ಸ್ನೇಹಿತರೇ, ಕನಕದಾಸ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರಾರಂಭ ಮಾಡಿರ‍್ತಕ್ಕಂಥ ಈ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೊದಲ ಸಮಾರಂಭದಲ್ಲಿ ಉದ್ಘಾಟಕನಾಗಿ ಭಾಷಣ ಮಾಡ್ತಿದ್ದೇನೆ.
  • ಯಾವುದೇ ಅಧ್ಯಯನಕ್ಕೂ ನಾವು ಮೊದಲು ಈ ಬದಲಾವಣೆಗಳನ್ನುಂಟು ಮಾಡುವ ಭೂವ್ಯಾಪಾರ ಕತೃಗಳ ಉತ್ಪತ್ತಿ, ಸ್ವಭಾವ ಮತ್ತು ಪ್ರಮಾಣಗಳ ಕೆಲವು ವಿಚಾರಗಳನ್ನೂ ಅದರೊಂದಿಗೆ ಈ ಕತೃಗಳು ನಡೆಸುತ್ತಿರುವ ಕಾರ್ಯಗತಿಯ ಕಾಲಾವಧಿಯ ನಿರ್ಧಿಷ್ಟ ಭಾವನೆಯನ್ನೂ ತಿಳಿದಿರಬೇಕೆಂಬುದು ಸ್ಪಷ್ಟವಾಗುತ್ತದೆ.
  • ನೋಡು ಭಗವಂತ, ನಿನ್ನ ಈ ಜಗದ ಸ್ಥಿತಿ ಏನಾಗಿದೆಯೆಂದು ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾರೆ ಮಾನವ ಸೂರ್ಯ ಬದಲಾಗಲಿಲ್ಲ, ಚಂದ್ರ ಬದಲಾಗಲಿಲ್ಲ, ಆಕಾಶ ಬದಲಾಗಲಿಲ್ಲ ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾನೆ ಮಾನವ
  • ಗಾಂಧೀಜೀ ಎಂದರೆ ಒಬ್ಬ ವ್ಯಕ್ತಿಯಲ್ಲ. ಅದು ಒಂದು ಪಂಥ. ಶಿಲ್ಪದಲ್ಲಿ ಜಕಣಾಚಾರಿ ಇದ್ದ ಹಾಗೆ.
  • ಜಗತ್ತಿನ ವೈವಿಧ್ಯಮಯ ಧರ್ಮ,ಮತಗಳು
  • ಸುಯೋಧನಾ.. ಏಳು, ಕುರುವಂಶದ ರಾಜನಾಗಿ, ಕರ್ಣನಂಥವನ ಸ್ನೇಹಕ್ಕಾಗಿ, ರಣರಂಗದಲ್ಲಿಯೇ ವೀರ ಮರಣವನ್ನಪ್ಪಿದ ನಿನ್ನೊಡನೆ ಸಗ್ಗದಲ್ಲಿ ಸಖ್ಯಕ್ಕೆ ನಿನ್ನವರಲ್ಲೊಬ್ಬರನ್ನು ಆರಸಿಕೋ. ಕುರುಕ್ಷೇತ್ರದಲ್ಲಿ ನಡೆದ ಧರ್ಮ ಯುದ್ಧದಲ್ಲಿ ಭಾಗಿಯಾದ ಯಾರಾದರೂ ಸರಿ; ನಿನ್ನಿಚ್ಛೆಯಂತೆ ನಿನ್ನೊಡನೆ ಕರೆದುಕೋ.
  • ವಯಸ್ಸಾದಂತೆ ಕೀಲುಗಳಿಗೆ 'ಆಸ್ಟಿಯೋ ಆರ್ಥ್ರೈಟಿಸ್‌' ಉಂಟಾಗಿ ಬಹುಪಾಲು ಜನರಿಗೆ ತೊಂದರೆಯಾಗುತ್ತದೆ. ಆದರೆ, ಇದರಿಂದ ಎಲ್ಲರೂ ನರಳುತ್ತಾರೆಂದಲ್ಲ. ಮಾಂಸಖಂಡ ಬಿಗಿಯಾಗುತ್ತದೆಂದೂ ಅಲ್ಲ. ಕೆಲವರಿಗೆ ಅಲ್ಪಸ್ವಲ್ಪ ಅನಾನುಕೂಲವಾಗಬಹುದು ಅಥವಾ ಯಾವುದೂ ಲಕ್ಷಣಗಳೂ ಇಲ್ಲದೆಯೂ ಇರಬಹುದು. ಇಂತಹ 'ಆಸ್ಟಿಯೋ ಆರ್ಥ್ರೈಟಿಸ್‌' ಅನ್ನು 'ಸೈಲೆಂಟ್‌‌' ಮಾದರಿಯ ಕಾಯಿಲೆಯೆನ್ನಬಹುದು.
  • ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.
  • ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ 'ಅಪೇರಾ'ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

Go to Top