show blocks helper
  • ವಯಸ್ಸಾದಂತೆ ಕೀಲುಗಳಿಗೆ 'ಆಸ್ಟಿಯೋ ಆರ್ಥ್ರೈಟಿಸ್‌' ಉಂಟಾಗಿ ಬಹುಪಾಲು ಜನರಿಗೆ ತೊಂದರೆಯಾಗುತ್ತದೆ. ಆದರೆ, ಇದರಿಂದ ಎಲ್ಲರೂ ನರಳುತ್ತಾರೆಂದಲ್ಲ. ಮಾಂಸಖಂಡ ಬಿಗಿಯಾಗುತ್ತದೆಂದೂ ಅಲ್ಲ. ಕೆಲವರಿಗೆ ಅಲ್ಪಸ್ವಲ್ಪ ಅನಾನುಕೂಲವಾಗಬಹುದು ಅಥವಾ ಯಾವುದೂ ಲಕ್ಷಣಗಳೂ ಇಲ್ಲದೆಯೂ ಇರಬಹುದು. ಇಂತಹ 'ಆಸ್ಟಿಯೋ ಆರ್ಥ್ರೈಟಿಸ್‌' ಅನ್ನು 'ಸೈಲೆಂಟ್‌‌' ಮಾದರಿಯ ಕಾಯಿಲೆಯೆನ್ನಬಹುದು.
  • ಪ್ರತಿಫಲನ ಎಂದರೇನು? ಒಂದು ಮಾಧ್ಯಮದಲ್ಲಿ ವಸ್ತುವಿನ ಮೇಲೆ ಬಿದ್ದ ತರಂಗವು ಹಿಂತಿರುಗಿ ಅದೇ ಮಾಧ್ಯಮಕ್ಕೆ ಬರುವ ಕ್ರಿಯೆಯನ್ನು ಪ್ರತಿಫಲನ ಎನ್ನುತ್ತೇವೆ. ಉದಾಹರಣೆಗೆ ಬೆಳಕಿನ ಪ್ರತಿಫಲನ, ಶಬ್ದದ ಪ್ರತಿಫಲನ ಮತ್ತು ನೀರಿನ ತರಂಗಗಳ ಪ್ರತಿಫಲನ ನಿಮಗೆ ಗೊತ್ತೆ ಶಬ್ದ ತನ್ನ ಆಕರದಿಂದ ಹೇಗೆ ಪ್ರಸರಣೆಯಾಗುತ್ತದೆ ಎಂದು? ಶಬ್ದವು ಗಾಳಿಯಲ್ಲಿ ನೀಳತರಂಗಗಳಾಗಿ ಪ್ರಸರಣೆಯಾಗುತ್ತದೆ. ಗಾಳಿಯ ಗುಣಲಕ್ಷಣಗಳ ಮೂಲಕ ಶಬ್ದದ ಜವವನ್ನು ಕಂಡುಹಿಡಿಯಬಹುದು ಹೊರತಾಗಿ ಶಬ್ದದ ಆವೃತ್ತಿ ಅಥವಾ ಕಂಪನ ವಿಸ್ತಾರದಿಂದಲ್ಲ. ಒಂದು ಮೇಲ್ಮೈಗೆ ತಾಗಿದ ಶಬ್ದತರಂಗವು ಹೀರದೆ ಅಥವಾ ಚಲಿಸದೆ ಇದ್ದರೆ ಅದು ಪ್ರತಿಫಲನ ಹೊಂದುತ್ತದೆ. ಶಬ್ದ ಪ್ರತಿಫಲನದ ನಿಯಮವು ಬೆಳಕಿನ ಪ್ರತಿಫಲನ ನಿಯಮದ ರೀತಿಯೇ ಇದೆ, ಅಂದರೆ ಫಲಿತ ಕೋನದ ಅಳತೆಯು ಪ್ರತಿಫಲನ ಕೋನದ ಅಳತೆಗೆ ಸಮವಿರುತ್ತದೆ. ದರ್ಪಣದಲ್ಲಿ ಹೇಗೆ ಪಾರ್ಶ್ವಪಲ್ಲಟ ಕ್ರಿಯೆ ನಡೆಯುತ್ತದೆಯೋ ಹಾಗೆ. ಹೇಗೆ ಶಬ್ದ ಪ್ರತಿಫಲನವನ್ನು ವಿವರಿಸಬಹುದು? ಮಾಧ್ಯಮದಲ್ಲಿ ಚಲಿಸುತ್ತಿರುವ ಶಬ್ದ ತರಂಗಗಳು, ಮೇಲ್ಮೈಗೆ ತಾಗಿ ಮತ್ತು ಅದೇ ಮಾಧ್ಯಮದಿಂದ ಹಿಂತಿರುಗಿ ಬರುವ ಕ್ರಿಯೆಗೆ ಶಬ್ದತರಂಗದ ಪ್ರತಿಫಲನ ಎನ್ನುತ್ತೇವೆ. ಆ ತರಂಗಗಳನ್ನು ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎನ್ನುತ್ತೇವೆ. ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎಂದರೇನು? ಪ್ರತಿಫಲಕದ ಕಡೆಗೆ ಚಲಿಸುವ ಶಬ್ದ ತರಂಗಗಳನ್ನು ಆಪಾತ/ಪತನ ಶಬ್ದ ತರಂಗಗಳು ಎನ್ನುವರು. ಪ್ರತಿಫಲಕದಿಂದ ಹಿಂದಿರುವ ಶಬ್ದ ತರಂಗಗಳನ್ನು ಪ್ರತಿಫಲಿತ ಶಬ್ದ ತರಂಗಗಳು ಎನ್ನುವರು. ಪ್ರಾಯೋಗಿಕವಾಗಿ ಆಪಾತ ಬಿಂದು ಮತ್ತು ಪ್ರತಿಫಲಿತ ಬಿಂದು ಪ್ರತಿಫಲನ ಮೇಲ್ಮೈ ಮೇಲೆ ಒಂದೇ ಆಗಿರುತ್ತದೆ. ಪತನ ಬಿಂದುವಿನಲ್ಲಿ ಎಳೆದ ಲಂಬವನ್ನು ಲಂಬ ಎನ್ನುವರು.ಶಬ್ದ ತರಂಗವು ಲಂಬದಲ್ಲಿ ಉಂಟುಮಾಡಿದ ಕೋನವನ್ನು ಆಪಾತ ಕೋನ ಎನ್ನುವರು. “i” ಲಂಬದಿಂದ ಪ್ರತಿಫಲನಗೊಂಡ ಶಬ್ದತರಂಗದ ಕೋನವನ್ನು ಪ್ರತಿಫಲನ ಕೋನ “r” ಎನ್ನುವರು. ಫ್ರತಿಫಲನದ ನಿಯಮಗಳು ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ. ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ. ಕಲಿವಿನ ಫಲಗಳು : ವಿದ್ಯಾರ್ಥಿಗಳು ಶಬ್ದ ತರಂಗದ ಮೊದಲನೆ ಮತ್ತು ಎರಡನೆ ಪ್ರತಿಫಲನದ ನಿಯಮಗಳನ್ನು ತಿಳಿಯುತ್ತಾರೆ. ಪ್ರತಿಫಲನದ ಮೊದಲನೆಯ ನಿಯಮ : ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ. ಪ್ರತಿಫಲನದ ಎರಡನೆಯ : ನಿಯಮ ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ.
  • ಸರಣಿ ವಿದ್ಯುತ್  ಮಂಡಲಗಳೆಂದರೇನು ? ಎಂದು ತಿಳಿಯುವ ಮೊದಲು , ವಿದ್ಯುತ್ ಮಂಡಲಗಳೆಂದರೇನು? ಮತ್ತು ಅವುಗಳ ವಿಧಗಳಾವುವು ? ಎಂದು ತಿಳಿಯುವುದು ಅಗತ್ಯ.
  • ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.
  • ಸ್ಪಿಂಗ್ ತ್ರಾಸು ಮತ್ತು ಅಳತೆಯ ಜಾಡಿಯನ್ನು ಉಪಯೋಗಿಸಿ ನೀರಿಗಿಂತ ಹೆಚ್ಚಿನ ಸಾಂದ್ರತೆ ಇರುವ ಘನವಸ್ತುವಿನ ಸಾಂದ್ರತೆಯನ್ನು ಕಂಡು ಹಿಡಿಯುವುದು.
  • ಸ್ಲಿಂಕಿ ( ಹಿಗ್ಗಿಸಿದ ಸ್ಪ್ರಿಂಗ್ ) ನಲ್ಲಿ ಒಂದು ಕಂಪನದ ವೇಗವನ್ನು ಕಂಡುಹಿಡಿಯುವುದು.
  • ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ 'ಅಪೇರಾ'ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

Go to Top