Class 9: ಸಂಯುಕ್ತ ವಸ್ತು ಮತ್ತು ಮಿಶ್ರಣಗಳ ನಡುವಿನ ವ್ಯತ್ಯಾಸ

ಮಿಶ್ರಣ ಮತ್ತು ಸಂಯುಕ್ತಗಳ ನಡುವಿನ ವ್ಯತ್ಯಾಸ

ನಮ್ಮ ಉದ್ದೇಶ

1. ಮಿಶ್ರಣವನ್ನು ತಯಾರಿಸುವುದು

2. ಸಂಯುಕ್ತ ವಸ್ತುವನ್ನು ತಯಾರಿಸುವುದು

ಕಬ್ಬಿಣದ ರಜಗಳು ಮತ್ತು ಗಂಧಕದ ಪುಡಿಯನ್ನು ಉಪಯೋಗಿಸಿ ಮಿಶ್ರಣ ಮತ್ತು ಸಂಯುಕ್ತ ವಸ್ತುವನ್ನು ಈ ಕೆಳಗಿನವುಗಳ ಆಧಾರದ ಮೇಲೆ ಪ್ರತ್ಯೇಕಿಸುವುದು

• ಸಮಜ್ಯಾತ ಮತ್ತು ಅಸಮಜ್ಯಾತ ಭೌತಿಕ ಲಕ್ಷಣಗಳು

• ಅಯಸ್ಕಾಂತದೊಂದಿಗೆ ವರ್ತನೆ

• ಕಾರ್ಬನ್ ಡೈ ಸಲ್ಫೈಡ್ ದ್ರಾವಕದೊಂದಿಗಿನ ವರ್ತನೆ

• ಉಷ್ಣತೆಯ ಪರಿಣಾಮ

• ದುರ್ಬಲ ಹೈಡ್ರೊಕ್ಲೋರಿನ್ ಆಮ್ಲದೊಂದಿಗೆ ಕಾಯಿಸಿದಾಗ ಉಂಟಾಗುವ ಪರಿಣಾಮ

Kindly register to read the book. Thank you.!

Description

ಈಗ ನಾವು ವಸ್ತುಗಳನ್ನು ಹೇಗೆ ವಿಂಗಡಿಸಿದ್ದಾರೆ ಎಂದು ಅಧ್ಯಯನ ಮಾಡೋಣ. ಪ್ರತಿಯೊಂದು ವಸ್ತುಗಳನ್ನು ಶುದ್ಧವಾದ ವಸ್ತುಗಳು ಮತ್ತು ಮಿಶ್ರಣ ಎಂದು ಎರಡು ವಿಭಾಗ ಮಾಡಲಾಗಿದೆ.
ಶುದ್ಧ ವಸ್ತುಗಳು  ಧಾತುಗಳು ಮತ್ತು ಸಂಯುಕ್ತ ವಸ್ತುಗಳನ್ನು ಒಳಗೊಂಡಿದೆ. ಮಿಶ್ರಣವನ್ನು ಸಮಜ್ಯಾತ ಮಿಶ್ರಣ (ಒಂದೇ ರೀತಿಯ ಕಣಗಳಿಂದ ಮಾಡಲ್ಪಟ್ಟಿರುತ್ತದೆ). ಅಸಮಜ್ಯಾತ ಮಿಶ್ರಣ (ಬೇರೆ ಬೇರೆ ರೀತಿಯ ಕಣಗಳಿಂದ ಮಾಡಲ್ಪಟ್ಟಿರುತ್ತದೆ)

ಧಾತುಗಳು ಮತ್ತು ಸಂಯುಕ್ತ ವಸ್ತುಗಳು ಎಂದರೇನು?
ಧಾತುಗಳು (ಮೂಲವಸ್ತು).
ಪ್ರಕೃತಿಯಲ್ಲಿ ಧಾತುಗಳು ಬಹಳ ಸರಳ ವಸ್ತುಗಳು. ಭೂಮಿಯಲ್ಲಿ 90 ಧಾತುಗಳು ಸ್ವಾಭಾವಿಕವಾಗಿ ಸಿಗುವಂತವುಗಳು. ಭೌತಿಕವಾಗಿ ಅಥವಾ ರಾಸಾಯನಿಕವಾಗಿ ಧಾತುಗಳನ್ನು ಭೇಧಿಸಲು ಸಾಧ್ಯವಿಲ್ಲ. ಧಾತುಗಳು ಒಂದೇ ರೀತಿಯ ಸರಳ ಪರಮಾಣುಗಳಿಂದ ಮಾಡಲ್ಪಟ್ಟಿರುತ್ತದೆ. ಧಾತುಗಳು ಸರಳ ಪರಮಾಣುಗಳಾಗಿ (ಆರ್ಗಾನ್, ಕ್ಯಾಲ್ಸಿಯಂ, ಅಲ್ಯುಮಿನಿಯಂ) ಅಥವಾ ಅಣುಗಳಾಗಿ ಇರುತ್ತವೆ.(ಆಮ್ಲಜನಕ, ಸಾರಜನಕ).

 

ಸಂಯುಕ್ತ ವಸ್ತುಗಳು:

ಎರಡೂ ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬೆರೆತಾಗ ಸಂಯುಕ್ತ ವಸ್ತುಗಳು ಉಂಟಾಗುತ್ತವೆ. ಧಾತುಗಳಲ್ಲಿ ಪರಮಾಣುಗಳು ರಾಸಾಯನಿಕವಾಗಿ ಬೆರೆತಿರುತ್ತವೆ ಹಾಗೂ ಅವುಗಳ ನಡುವೆ ರಾಸಾಯನಿಕ ಬಂಧ ಏರ್ಪಟ್ಟಿರುತ್ತದೆ. ಸಂಯುಕ್ತ ವಸ್ತುಗಳಲ್ಲಿ ಧಾತುಗಳು ನಿರ್ಧಿಷ್ಟ ಅನುಪಾತದಲ್ಲಿ ಬೆರೆತಿರುತ್ತವೆ.

ಸಂಯುಕ್ತ ವಸ್ತುವಿನಲ್ಲಿ ಬೆರೆತಿರುವ ವಸ್ತುಗಳು ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡಿರುತ್ತವೆ ಮತ್ತು ಸಂಯುಕ್ತ ವಸ್ತುವಿನ ಗುಣಲಕ್ಷಣವೂ ಸಹ ಅದರಲ್ಲಿ ಬೆರೆತಿರುವ ವಸ್ತುಗಳ ಗುಣಲಕ್ಷಣಗಿಂತಲೂ ಬೇರೆಯಾಗಿರುತ್ತದೆ. ಉದಾಹರಣೆಗೆ ಕಬ್ಬಿಣವು ಒಂದು ಲೋಹವಾಗಿದ್ದು ಅಯಸ್ಕಾಂತದ ಗುಣಗಳನ್ನು ಹೊಂದಿರುತ್ತದೆ. ಆಮ್ಲಜನಕವೂ ಧಾತುವಾಗಿದ್ದು ಬಣ್ಣರಹಿತ, ವಾಸನೆರಹಿತ ಅನಿಲವಾಗಿರುತ್ತದೆ. ಕಬ್ಬಿಣವು ತುಕ್ಕುಹಿಡಿದಾಗ ಕಬ್ಬಿಣವು ವಾತಾವರಣದಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಕಬ್ಬಿಣದ ಆಕ್ಸೈಡ್ ಕಬ್ಬಿಣ ಮತ್ತು ಗಂಧಕದ ಗುಣಗಳಿಗಿಂತ ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಕಬ್ಬಿಣದ ಆಕ್ಸೈಡ್ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿ ಘನವಸ್ತುವಾಗಿರುತ್ತದೆ. ಸಂಯುಕ್ತವಸ್ತುವಿನಲ್ಲಿರುವ ವಸ್ತುಗಳನ್ನು ರಾಸಾಯನಿಕ ವಿಧಾನದಿಂದ ಬೇರ್ಪಡಿಸಬಹುದು. ಸಂಯುಕ್ತ ವಸ್ತುಗಳು ಸಮಜ್ಯಾತವಾಗಿದ್ದು ನಿರ್ಧಿಷ್ಟವಾದ ಕರಗುವ ಬಿಂದು ಮತ್ತು ಕುದಿಯುವ ಬಿಂದುಗಳನ್ನು ಹೊಂದಿರುತ್ತದೆ.

ಉದಾಹರಣೆ: ನೀರು (H2O),  ಸೋಡಿಯಂ ಕ್ಲೋರೈಡ್ (NaCl),  ಅಮೋನಿಯಾ (NH3),  ಎಥನಾಲ್ (C2H5OH)

ಈಗ ಮಿಶ್ರಣಗಳು ಎಂದರೇನು? ಅವುಗಳನ್ನು ಹೇಗೆ ವಿಂಗಡಿಸಿದ್ದಾರೆ?

ಮಿಶ್ರಣಗಳು

ಎರಡೂ ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳು ಭೌತಿಕವಾಗಿ ಬೆರೆತಿರುವುದನ್ನು ಮಿಶ್ರಣ ಎನ್ನುವರು ಮತ್ತು ಆ ವಸ್ತುಗಳು ರಾಸಾಯನಿಕವಾಗಿ ಒಂದೇ ಆಗಿರುವುದಿಲ್ಲ. ಮಿಶ್ರಣದಲ್ಲಿರುವ ವಸ್ತುಗಳು ಯಾವುದೇ ಪ್ರಮಾಣದಲ್ಲಿ ಬೆರೆತಿರಬಹುದು ಮತ್ತು ಬರಿಗಣ್ಣಿನಲ್ಲಿ ಮಿಶ್ರಣದಲ್ಲಿರುವ ವಸ್ತುಗಳನ್ನು ಪತ್ತೆ ಮಾಡಬಹುದು. ಮಿಶ್ರಣದಲ್ಲಿ ಬೆರೆತಿರುವ ವಸ್ತುಗಳ ಯಾವುದೇ ಗುಣಗಳು ಬದಲಾಗುವುದಿಲ್ಲ.

ಉದಾಹರಣೆಗೆ:- ಕಾರ್ಬನ್ ಡೈ ಸಲ್ಫೈಡ್ ಅನ್ನು ಗಂಧಕ ಮತ್ತು ಕಬ್ಬಿಣದ ಮಿಶ್ರಣಕ್ಕೆ ಹಾಕಿದಾಗ ಗಂಧಕವು ಕಾರ್ಬನ್ ಡೈ ಸಲ್ಫೈಡ್ ನಲ್ಲಿ  ಕರಗಿ ಪುನಃ ಪ್ರನಾಳದ ತಳದಲ್ಲಿ ಘನಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲಿಗೆ ಕಾರ್ಬನ್ ಡೈ ಸಲ್ಫೈಡ್ ನ ಕೆಲವು ಹನಿಗಳನ್ನು ಗಂಧಕ ಮತ್ತು ಕಬ್ಬಿಣದ ರಜಗಳಿರುವ ಪ್ರನಾಳಕ್ಕೆ ಹಾಕಿ ಚೆನ್ನಾಗಿ ಅಲ್ಲಾಡಿಸಿ. ಗಂಧಕವು ಕಾರ್ಬನ್ ಡೈ ಸಲ್ಫೈಡ್ ನಲ್ಲಿ ಕರಗಿ ಹಳದಿ ಬಣ್ಣದ ದ್ರಾವಣವನ್ನು ಉಂಟು ಮಾಡುತ್ತದೆ. ತಿಳಿಯಾದ ಹಳದಿ ಬಣ್ಣದ ದ್ರಾವಣವನ್ನು ಚೈನಾಡಿಶ್  ಗೆ ವರ್ಗಾಯಿಸಿ. ಕೆಲವು ಸಮಯದ ನಂತರ CS2   ಆವಿಯಾಗಿ ಗಂಧಕದ ಪುಡಿಯು ಚೈನಾಡಿಶ್ ನಲ್ಲಿ  ಕಾಣಿಸಿಕೊಳ್ಳುತ್ತದೆ.

ಮಿಶ್ರಣದ  ಗುಣಲಕ್ಷಣಗಳು  ಅದರಲ್ಲಿ ಬೆರೆತಿರುವ ವಸ್ತುಗಳ ಗುಣಲಕ್ಷಣದ ಹಾಗೆಯೇ ಇರುತ್ತದೆ ಮತ್ತು ಇವುಗಳನ್ನು ಭೌತಿಕ ವಿಧಾನಗಳಿಂದ  ಬೇರ್ಪಡಿಸಬಹುದು. ಉದಾಹರಣೆಗೆ ಅಯಸ್ಕಾಂತದಿಂದ ಗಂಧಕ ಮತ್ತು ಕಬ್ಬಿಣದ ರಜಗಳನ್ನು ಬೇರ್ಪಡಿಸಬಹುದು.

ಮಿಶ್ರಣಗಳು ಸಮಜ್ಯಾತ ಅಥವಾ ಅಸಮಜ್ಯಾತ ಮಿಶ್ರಣಗಳಾಗಿರುತ್ತವೆ.

ಸಮಜ್ಯಾತ ಮಿಶ್ರಣ: ಸಮಜ್ಯಾತ ಮಿಶ್ರಣದಲ್ಲಿರುವ ವಸ್ತುಗಳು ಒಂದೇ ತರನಾಗಿ ಹರಡಿಕೊಂಡಿದ್ದು ಎಲ್ಲಾ ಕಡೆ ಸಮನಾಗಿ ಹಂಚಿಕೆಯಾಗಿರುತ್ತದೆ. ಸಮಜ್ಯಾತ ಮಿಶ್ರಣವನ್ನು ಒಂದು ಸೂಕ್ತ ದ್ರಾವಣ ಎಂದು ಕರೆಯಬಹುದು.

ಉದಾಹರಣೆ:- ಸಕ್ಕರೆ ದ್ರಾವಣ, ಸಮುದ್ರದ ನೀರು, ತಂಪು ಪಾನೀಯಗಳು ಇತ್ಯಾದಿ.

ಅಸಮಜ್ಯಾತ  ಮಿಶ್ರಣ: ಅಸಮಜ್ಯಾತ್ಯ ಮಿಶ್ರಣವು ಬೇರೆ ಬೇರೆ ವಸ್ತುಗಳನ್ನು ಒಳಗೊಂಡಿರುತ್ತದೆ.

ಉದಾಹರಣೆ:- ಗಂಧಕ ಮತ್ತು ಕಬ್ಬಿಣದ ಮಿಶ್ರಣ, ಉಪ್ಪು ಮತ್ತು ಮರಳಿನ ಮಿಶ್ರಣ.

ಕಲಿವಿನ ಫಲಗಳು

1) ವಿದ್ಯಾರ್ಥಿಗಳು ಮಿಶ್ರಣ ಮತ್ತು ಸಂಯುಕ್ತ ವಸ್ತುಗಳನ್ನು ವ್ಯಾಖ್ಯಾನಿಸುತ್ತಾರೆ.

2) ವಿದ್ಯಾರ್ಥಿಗಳು ಗಂಧಕದ ಮತ್ತು ಕಬ್ಬಿಣದ ಮಿಶ್ರಣ ಮತ್ತು ಗಂಧಕ ಕಬ್ಬಿಣದ ಸಂಯುಕ್ತ ವಸ್ತು (FeS)  ಅನ್ನು ಪರೀಕ್ಷಿಸುವುದರ ಮೂಲಕ ಪ್ರತ್ಯೇಕಿಸುವ ಕೌಶಲವನ್ನು ಪಡೆಯುತ್ತಾರೆ.

• ಭೌತಿಕ ಗುಣಲಕ್ಷಣಗಳು

• ಅಯಸ್ಕಾಂತದೊಂದಿಗೆ ವರ್ತನೆ

• ಕಾಯಿಸುವುದರ ಮೇಲಿನ ಪರಿಣಾಮ

• CS2 ನೊಂದಿಗೆ ವರ್ತನೆ

• ದುರ್ಬಲ ಆಮ್ಲದೊಂದಿಗೆ ವರ್ತನೆ

3) ವಿದ್ಯಾರ್ಥಿಗಳು ಮಿಶ್ರಣ ಮತ್ತು ಸಂಯುಕ್ತ ವಸ್ತುವಿನ ಗುಣಲಕ್ಷಣಗಳ ಬಗ್ಗೆ ಜ್ಞಾನವನ್ನು ಹೊಂದುತ್ತಾರೆ.

4) ವಿದ್ಯಾರ್ಥಿಗಳು ಪೂರ್ವಾಧಾರಿತ ಜ್ಞಾನದೊಂದಿಗೆ ಮಿಶ್ರಣ ಮತ್ತು ಸಂಯುಕ್ತ ವಸ್ತುಗಳನ್ನು ಪ್ರತ್ಯೇಕಿಸುವರು.

  ನಾವು ಈಗ ಮಿಶ್ರಣ ಮತ್ತು ಸಂಯುಕ್ತ ವಸ್ತುಗಳನ್ನು ಹೇಗೆ ಪ್ರತ್ಯೇಕಿಸುವುದನ್ನು ನೋಡೋಣ.

Additional information

Author

Language

Publisher

Year

Go to Top