ಮಿಶ್ರಣದ ಘಟಕಗಳನ್ನು ಕೆಳಕಂಡ ವಿಧಾನಗಳಿಂದ ಬೇರ್ಪಡಿಸಬಹುದು.
- ಬೇರ್ಪಡಿಸುವ ಆಲಿಕೆ
- ವರ್ಣ ರೇಖನ
- ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆ
- ಸರಳ ಭಟ್ಟಿ ಇಳಿಸುವಿಕೆ
- ಆಂಶಿಕ ಭಟ್ಟಿ ಇಳಿಸುವಿಕೆ
ಮಿಶ್ರಣದ ಘಟಕಗಳನ್ನು ಕೆಳಕಂಡ ವಿಧಾನಗಳಿಂದ ಬೇರ್ಪಡಿಸಬಹುದು.
Kindly register to read the book. Thank you.!
ನಮ್ಮ ಪರಿಸರದಲ್ಲಿರುವ ಬಹಳಷ್ಟು ವಸ್ತುಗಳು ಎರಡು ಅಥವಾ ಹೆಚ್ಚು ಘಟಕಗಳ ಮಿಶ್ರಣವಾಗಿವೆ . ಈ ಮಿಶ್ರಣಗಳು ಸಮಾಂಗೀಯ ಅಥವಾ ಅಸಮಾಂಗೀಯವಾಗಿವೆ.
ಸಮಾಂಗೀಯ ಮಿಶ್ರಣಗಳ ಘಟಕಗಳು ಏಕರೂಪವಾಗಿದ್ದು, ಅಸಮಮಾಂಗೀಯ ಮಿಶ್ರಣಗಳ ಘಟಕಗಳು ಏಕರೂಪವಾಗಿರುವುದಿಲ್ಲ.
ಗಾಳಿಯು ಸಮಾಂಗೀಯ ಮಿಶ್ರಣವಾಗಿದ್ದು, ನೀರಿನಲ್ಲಿರುವ ಎಣ್ಣೆ ಅಸಮಾಂಗೀಯ ಮಿಶ್ರಾಣವಾಗಿದೆ.ಸಮಾಂಗೀಯ ಮತ್ತು ಅಸಮಾಂಗೀಯ ಮಿಶ್ರಣಗಳನ್ನು ವಿವಿಧ ಭೌತ ವಿಧಾನಗಳಿಂದ ಬೇರ್ಪಡಿಸಬಹುದು. ಮಿಶ್ರಣದ ಘಟಕಗಳ ರಾಸಾಯನಿಕ ಗುಣಗಳು ಹಾಗೂ ಮಿಶ್ರಣಗಳ ವಿಧಗಳ ಮೇಲೆ ಯಾವ ವಿಧಾನದಿಂದ ಬೇರ್ಪಡಿಸಬಹುದು ಎಂದು ತೀರ್ಮಾನಿಸಬಹುದು.
ಎರಡು ಮಿಶ್ರವಾಗದ ದ್ರವಗಳ ಹಂತಗಳನ್ನು ಅವುಗಳ ಘಟಕಗಳಾಗಿ ಬೆರ್ಪೇಡಿಸಲು ಬಳಸುತ್ತಾರೆ. ಒಂದು ಹಂತವು ಜಲೀಯ ಮತ್ತೊಂದು ಸಾವಯವ ಹಂತವಾಗಿರುತ್ತದೆ.ಈ ಬೇರ್ಪಡಿಸುವಿಕೆಯು ದ್ರವಗಳ ವಿವಿಧ ಸಾಂದ್ರತೆಯನ್ನು ಅವಲಂಬಿಸಿದೆ. ಹೆಚ್ಚು ಸಾಂದ್ರತೆಯುಳ್ಳ ದ್ರವವು ಕೆಳಪದರವನ್ನು ಹಾಗೂ ಕಡಿಮೆ ಸಾಂದ್ರತೆಯುಳ್ಳ ದ್ರವವು ಮೇಲ್ಪದರವನ್ನು ಸೇರುತ್ತದೆ.
ಅನ್ವಯಗಳು
ವರ್ಣ ರೇಖನ
ವರ್ಣರೇಖನ ವಿಧಾನವು ಒಂದು ಬೇರ್ಪಡಿಸುವ ತಂತ್ರವಾಗಿದೆ. ಇದನ್ನು ದ್ರವಗಳ ಮಿಶ್ರಣದಿಂದ ಅದರ ಘಟಕಗಳನ್ನು ಬೇರ್ಪಡಿಸಲು
ಬಳಸಲಾಗುತ್ತದೆ. ಈ ವಿಧಾನವನ್ನು ರಷ್ಯಾದ ವಿಜ್ಞಾನಿ ಮೈಕಲ್ ಸ್ವೇಟ್ ಎಂಬುವರು ಪರಿಚಯಿಸಿದರು. ವರ್ಣ ರೇಖನ ವಿಧಾನವು
ಮಾದರಿಯನ್ನು ನಿರ್ದಿಷ್ಟ ದ್ರಾವಕದಲ್ಲಿ ಕರಗಿಸುವ ವಿಧಾನವನ್ನು( ಚಲಿಸುವ ಹಂತ )ಒಳಗೊಂಡಿದೆ. ಚಲಿಸುವ ಹಂತವು ಅನಿಲವಾಗಿರಬಹುದು ಅಥವಾ ದ್ರವವಾಗಿರಬಹುದು. ಚಲಿಸುವ ಹಂತವು ಸ್ಥಿರ ಹಂತದ ಮೂಲಕ ಹಾದು ಹೋಗುತ್ತದೆ. ಸ್ಥಿರ ಹಂತವು ಗಾಜಿನ ತಟ್ಟೆಯಲ್ಲಿರುವ ಘನ ವಸ್ತುವಾಗಿರಬಹುದು ಅಥವಾ ವರ್ಣರೇಖನ ಕಾಗದವಾಗಿರಬಹುದು.
ಮಿಶ್ರಣ ದಲ್ಲಿರುವ ಘಟಕಗಳು ವಿವಿಧ ವೇಗದಲ್ಲಿ ಪಸರಿಸುತ್ತಿರುದರಿಂದ ಅವುಗಳನ್ನು ಬೇರ್ಪಡಿಸಬಹುದು.ವರ್ಣರೇಖನ ವಿಧಾನದಲ್ಲಿ ವಿವಿಧ ತಂತ್ರಗಳನ್ನು ಬಳಸಲಾಗುತ್ತದೆ. ಸ್ಥಂಭ ವರ್ಣ ರೇಖನ, ತೆಳು ಪದರ ವರ್ಣರೇಖನ , ಕಾಗದ ವರ್ಣರೇಖನ , ಅನಿಲ ವರ್ಣರೇಖನ.
ಕಾಗದ ವರ್ಣರೇಖನ ಬೇರ್ಪಡಿಸುವ ವಿಧಾನವು ವರ್ಣರೇಖನ ತಂತ್ರದ ಒಂದು ಬಹು ಮುಖ್ಯ ವಿಧಾನವಾಗಿದೆ. ಈ ವಿಧಾನದಲ್ಲಿ ಕಾಗದವನ್ನು ಸ್ಥಿರ ಸ್ಥಿತಿಯಾಗಿಯೂ ದ್ರವ ದ್ರಾವಕವನ್ನು ಚಲಿಸುವ ಸ್ಥಿತಿಯಾಗಿಯೂ ಬಳಸಲಾಗುತ್ತದೆ. ಕಾಗದ ವರ್ಣರೇಖನ ತಂತ್ರದಲ್ಲಿ ಮಿಶ್ರಣದ ಒಂದು ಚುಕ್ಕೆಯನ್ನು ಕಾಗದದ ಮೇಲಿಟ್ಟು ಈ ಕಾಗದವನ್ನು ದ್ರಾವಕದಲ್ಲಿ ಎಚ್ಚರಿಕೆಯಿಂದ ಮುಳುಗಿಸಲಾಗುತ್ತದೆ. ಕೆಪಿಲ್ಲರಿ ಕ್ರಿಯೆಯಿಂದಾಗಿ ದ್ರಾವಕವು ಕಾಗದದ ಮೇಲೇರುತ್ತದೆ. ಮತ್ತು ಮಿಶ್ರಣದ ಘಟಕಗಳು ಬೇರೆ ಬೇರೆ ದರದಲ್ಲಿ ಮೇಲೇರುತ್ತವೆ ಮತ್ತು ಈ ರೀತಿಯಾಗಿ ಒಂದಕ್ಕೊಂದು ಬೇರ್ಪಡುತ್ತವೆ.
ಅನ್ವಯಗಳು
ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆ
ಶೋಧಕ ಕಾಗದಿಂದ ಕೆಲವೊಮ್ಮೆ ಸಣ್ಣ ಘನ ವಸ್ತುಗಳು ಹರಿಯಬಹುದು. ಅಂತಹ ವಸ್ತುಗಳನ್ನು ಶೋಧಿಸುವಿಕೆ ವಿಧಾನದಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಿಶ್ರಣ ಗಳನ್ನು ಕೇಂದ್ರತ್ಯಾಗಿ ಶೋಷಕ ಪ್ರಕ್ರಿಯೆ ವಿಧಾನದಿಂದ ಬೇರ್ಪಡಿಸಬಹುದು. ಕೇಂದ್ರ ತ್ಯಾಗಿಶೋಷಕ ಪ್ರಕ್ರಿಯೆ ವಿಧಾನವನ್ನು ದ್ರವದಲ್ಲಿ ಕರಗದೇ ಇರುವ ವಸ್ತುಗಳನ್ನು ಸಾಮಾನ್ಯ ಶೋಧಿಸುವಿಕೆ ಪ್ರಕ್ರಿಯೆಯಿಂದ ಬೇರ್ಪಡಿಸಲು
ಸಾಧ್ಯವಿಲ್ಲದಾಗ ಬಳಸುತ್ತೇವೆ.ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆ ವಿಧಾನವು ಗಾತ್ರ, ಆಕಾರ, ಕಣಗಳ ಸಾಂದ್ರತೆ, ಮಾಧ್ಯಮಗಳ ಸ್ನಿಗ್ದತೆ ಮತ್ತು ತಿರುಗುವ ವೇಗಗತಿಯನ್ನುಅವಲಂಭಿಸಿದೆ.ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆ ತತ್ವವು ಜೋರಾಗಿ ತಿರುಗಿಸಿದಾಗ ಸಾಂದ್ರ ಕಣಗಳು ಬಲವಂತವಾಗಿ ತಳಭಾಗಕ್ಕೆ ಸೇರುತ್ತವೆ ಮತ್ತು ಹಗುರ ಕಣಗಳು ಮೇಲೆ ಉಳಿಯುತ್ತವೆ.
ಕೇಂದ್ರ ತ್ಯಾಗಿ ಶೋಷಕ ಪ್ರಕ್ರಿಯೆಯಲ್ಲಿ ಬಳಸುವ ಉಪಕರಣವನ್ನು ಕೇಂದ್ರ ತ್ಯಾಗಿ ಶೋಷಕ ಎನ್ನುತ್ತೇವೆ. ಕೇಂದ್ರ ತ್ಯಾಗಿ ಶೋಷಕವು ಕೇಂದ್ರ
ತ್ಯಾಗಿ ಶೋಷಕ ನಳಿಕೆಗಳ ಹಿಡಿಕೆಯನ್ನು ಹೊಂದಿದೆ. ಇದನ್ನು ಯಂತ್ರದ ತಿರುಗುವ ಭಾಗ ( ರೋಟರ್ ) ಎನ್ನುತ್ತಾರೆ. ಈ ರೋಟರ್
ಸಮಪ್ರಮಾಣದ ಘನ-ದ್ರವಗಳ ಮಿಶ್ರಣವಿರುವ ಸಮ ತೂಕದ ಕೇಂದ್ರ ತ್ಯಾಗಿ ಶೋಷಕ ನಳಿಕೆಗಳನ್ನು ಹಿಡಿದಿರುತ್ತದೆ.ರೋಟರ್ ಜೋರಾಗಿ ತಿರುಗುವಂತೆ ಮಾಡಿದಾಗ ಕೇಂದ್ರ ತ್ಯಾಗಿ ಶೋಷಕ ನಳಿಕೆಗಳು ಸಮತಲವಾಗಿ ತಿರುಗಲಾರಂಭಿಸುತ್ತವೆ. ಮತ್ತು ಕೇಂದ್ರ ತ್ಯಾಗಿ ಪ್ರತಿಕ್ರಿಯೆಯಿಂದಾಗಿ ಕರಗದೇ ಇರುವ ಸಾಂದ್ರಕಣಗಳು ದ್ರವದಿಂದ ಬೇರ್ಪಡುತ್ತವೆ ಮತ್ತು ತಿರುಗುವುದು ನಿಂತಾಗ ಕೇಂದ್ರ ತ್ಯಾಗಿಶೋಷಕ ನಳಿಕೆಯ ತಳ ಭಾಗದಲ್ಲಿ ಘನ ವಸ್ತುವಿನ ಕಣಗಳು ಮತ್ತು ಮೇಲ್ಭಾಗದಲ್ಲಿ ದ್ರವವಸ್ತುವು ಉಳಿಯುತ್ತವೆ.
ಅನ್ವಯಗಳು
ಸರಳ ಭಟ್ಟಿ ಇಳಿಸುವಿಕೆ
ಸರಳ ಭಟ್ಟಿ ಇಳಿಸುವಿಕೆ ವಿಧಾನವನ್ನು ಮಿಶ್ರ ಸಾಧ್ಯವಾದ ಎರಡು ದ್ರವಗಳ ಮಿಶ್ರಣದಿಂದ ಅವುಗಳನ್ನು ಬೇರ್ಪಡಿಸಲು ಬಳಸುತ್ತಾರೆ. ಈ
ದ್ರವಗಳು ಕುದಿಸಿದಾಗ ವಿಭಜನೆ ಹೊಂದುವುದಿಲ್ಲ ಹಾಗೂ ಅವುಗಳ ಕುದಿಯುವ ಬಿಂದುವಿನಲ್ಲಿ ಸಾಕಷ್ಟು ಅಂತರವಿರುತ್ತದೆ.
ಭಟ್ಟಿ ಇಳಿಸುವಿಕೆಯು ದ್ರವಗಳ ಮಿಶ್ರಣವನ್ನು ಕುದಿ ಬಿಂದುವಿನವರೆಗೂ ಕುದಿಸಿ ಆವಿಯನ್ನು ಉಪಕರಣದ ತಂಪಾದ ಭಾಗಕ್ಕೆ ವರ್ಗಾಯಿಸಿ,
ನಂತರ ಆವಿಯನ್ನು ಸಾಂದ್ರೀಕರಿಸಿ, ಸಾಂದ್ರೀಕರಿಸಿದ ದ್ರವವನ್ನು ಸಂಗ್ರಾಹಕದಲ್ಲಿ ಸಂಗ್ರಹಿಸುವ ವಿಧಾನವನ್ನು ಒಳಗೊಂಡಿದೆ .ಈ ವಿಧಾನದಲ್ಲಿ ದ್ರವದಲ್ಲಿನ ತಾಪ ಹೆಚ್ಚುತ್ತದೆ ಹಾಗೂ ಆವಿಯಲ್ಲಿನ ಒತ್ತಡವೂ ಹೆಚ್ಚುತ್ತದೆ. ದ್ರವದ ಆವಿಯಲ್ಲಿನ ಒತ್ತಡವು ವಾತಾವರಣದ ಒತ್ತಡಕ್ಕೆ ಸರಿಹೊಂದಿದಾಗ ದ್ರವವು ಅನಿಲ ರೂಪಕ್ಕೆ ಮಾರ್ಪಡುತ್ತದೆ. ಆವಿಯು ನೀರಿನ ಸಾಂದ್ರಕಕ್ಕೆ ಬರುವವರೆವಿಗೂ ಉಪಕರಣದ ಬಿಸಿ ಹಾಗಯೇ ಇರುತ್ತದೆ. ಆವಿಯು ಸಾಂದ್ರೀಕರಣ ಹೊಂದಿ , ಸಾಂದ್ರೀಕರಿಸಿದ ದ್ರವವು ಸಂಗ್ರಾಹಕದಲ್ಲಿ ಸಂಗ್ರಹಿಸಲ್ಪಡುತ್ತದೆ.
ಅನ್ವಯಗಳು
ಆಂಶಿಕ ಭಟ್ಟಿ ಇಳಿಸುವಿಕೆ
ಆಂಶಿಕ ಭಟ್ಟಿ ಇಳಿಸುವಿಕೆ ವಿಧಾನವನ್ನು ಮಿಶ್ರಸಾಧ್ಯವಾದ ಎರಡು ಹೆಚ್ಚು ದ್ರವಗಳ ಮಿಶ್ರಣದಿಂದ ಅವುಗಳನ್ನು ಬೇರ್ಪಡಿಸಲು ಬಳಸುತ್ತಾರೆ.ಇವುಗಳ ಕುದಿಬಿಂದುಗಳು ನಡುವಿನ ವ್ಯತ್ಯಾಸ 25 ಕೆಲ್ವಿನ್ ಗಿಂತ ಕಡಿಮೆಯಾಗಿರುತ್ತದೆ .
ದುಂಡು ತಳದ ಪ್ಲ್ಯಾಸ್ಕ್ ಮತ್ತು ಭಟ್ಟಿ ಇಳಿಸುವಿಕೆ ನಳಿಕೆ ಶಿರೋಭಾಗದ ನಡುವೆ ಆಂಶಿಕ ಆಸವನ ಸ್ತಂಭವನ್ನು ಜೋಡಿಸುವುದನ್ನು ಹೊರತು ಪಡಿಸಿದರೆ ಆಂಶಿಕ ಭಟ್ಟಿ ಇಳಿಸುವಿಕೆಯು ಸರಳ ಭಟ್ಟಿ ಇಳಿಸುವಿಕೆಯನ್ನೇ ಹೋಲುತ್ತದೆ .ಆಂಶಿಕ ಅಸವನ ಸ್ಥಂಭವು ಗಾಜಿನ ಬೀಡ್ ಗಳನ್ನು ಹೊಂದಿದ್ದು .ಗಾಜಿನ ಬೀಡ್ ಗಳು ಮೇಲ್ಮೈಯನ್ನು ತಣ್ಣಗೆ ಹಾಗೂ ಸಾಂದ್ರೀಕರಿಸಲು ಸಹಕರಿಸುತ್ತೆವೆ. ಮಿಶ್ರಣದಲ್ಲಿನ ಆವಿಯು ಆಂಶಿಕ ಅಸವನ ಸ್ಥಂಭದಲ್ಲಿ ಹರಿದಾಗ ಕಡಿಮೆ ಕುದಿ ಬಿಂದುವಿರುವ ದ್ರವವು ಬೇಗ ಹೊರಗೆ ಹರಿಯುತ್ತದೆ ಹಾಗೂ ಸಾಂದ್ರೀಕರಣ ಹೊಂದಿ ಸಂಗ್ರಾಹಕದಲ್ಲಿ ಸಂಗ್ರಹಿಸಲ್ಪಡುತ್ತದೆ. ಮತ್ತೊಂದು ದ್ರವವು ಹೆಚ್ಚು ಕುದಿ ಬಿಂದು ಇರುವುದರಿಂದ ಸ್ವಲ್ಪ ನಿಧಾನವಾಗಿ ಸಂಗ್ರಾಹಕದಲ್ಲಿ ಸಂಗ್ರಹಿಸಲ್ಪಡುತ್ತದೆ.
ಅನ್ವಯಗಳು
ಕಲಿವಿನ ಫಲಗಳು
1. ವಿದ್ಯಾರ್ಥಿಗಳು ದ್ರವ್ಯವನ್ನು ಹೊರತೆಗೆಯುವಿಕೆ, ವರ್ಣರೇಖನ, ಕೇಂದ್ರತ್ಯಾಗಿ ಶೋಷಕ ವಿಧಾನ, ಸರಳ ಭಟ್ಟಿ ಇಳಿಸುವಿಕೆ,ಆಂಶಿಕ
ಅಸವನ ಭಟ್ಟಿ ಇಳಿಸುವಿಕೆ ಪದಗಳನ್ನು ಅರಿಯುವರು.
2. ವಿದ್ಯಾರ್ಥಿಗಳು ರಾಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ಈ ಕೆಳಗಿನ ಪ್ರಯೋಗಗಳನ್ನು ಮಾಡುವ ಕೌಶಲವನ್ನು ಹೊಂದುತ್ತಾರೆ.
3. ವಿದ್ಯಾರ್ಥಿಗಳು ಮಿಶ್ರಣ್ದಲ್ಲಿರುವ ವಿವಿದ ದ್ರವಗಳ Rf ಅಂಶ, ಕುದಿ ಬಿಂದು, ಸಾಂದ್ರತೆಯ ಬಗ್ಗೆ ತಿಳಿಯುವರು.
4. ವಿದ್ಯಾರ್ಥಿಗಳು ಮಿಶ್ರಣದಲ್ಲಿರುವ ದ್ರವಗಳ ರಾಸಾಯನಿಕ ಗುಣಗಳು ಹಾಗೂ ಭೌತ ಗುಣಗಳನ್ನಾಧರಿಸಿ ಬೇರ್ಪಡಿಸುವ
ಸೂಕ್ತ ವಿಧಾನವನ್ನು ಆರಿಸುವರು.
5. ಅನಿಮೇಶನ್, ಸಿಮ್ಯುಲೇಷನ್ ಹಾಗೂ ವೀಡಿಯೋಗಳನ್ನಾಧರಿಸಿ ಸೂಕ್ತ ಬೇಕಾದ ವಸ್ತುಗಳನ್ನು ಆರಿಸುವರು.
6.ವಿದ್ಯಾರ್ಥಿಗಳು ಮಿಶ್ರಣದಲ್ಲಿರುವ ಘಟಕಗಳ ಬಗ್ಗೆ ಇರುವ ಮಾಹಿತಿಯನ್ನು ಆಧರಿಸಿ ಬೇರ್ಪಡಿಸುವ ಸೂಕ್ತ ವಿಧಾನವನ್ನು ಆರಿಸುವರು.
ಈಗ ವಿವಿಧ ಬೇರ್ಪಡಿಸುವಿಕೆ ವಿಧಾನಗಳನ್ನು ತಿಳಿಯೋಣ
Author | |
---|---|
Language | |
Publisher | |
Year |