Description
ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ವಸ್ತುಗಳನ್ನು ಪ್ರತಿವರ್ತಕಗಳೆಂದು ಅವುಗಳಿಂದ ಉತ್ಪತಿಯಾದ ವಸ್ತುಗಳನ್ನು ಉತ್ಪನ್ನಗಳೆಂದು ಕರೆಯುವರು.
ಫ್ರೆಂಚ್ ರಾಸಾಯನಶಾಸ್ತ್ರಜ್ಞ ಆಂಟೋನಿ ಲೆವೋಸಿಯರ್, ಆಧುನಿಕ ರಾಸಾಯನಶಾಸ್ತ್ರದ ಪಿತಾಮಹಾ. ಇವರು ರಾಸಾಯನಶಾಸ್ತ್ರವನ್ನು ಗುಣಾತ್ಮಕದಿಂದ ಪರಿಮಾಣಾತ್ಮಕ ವಿಜ್ಞಾನವಾಗಿ ಬದಲಾಯಿಸಿದ ಕೀರ್ತಿ ಇವರಿಗೆ ಲಭಿಸುತ್ತದೆ. ಪ್ರತಿವರ್ತಕದ ದ್ರವ್ಯರಾಶಿಯ ಮೊತ್ತವು ಉತ್ಪನ್ನದ ದ್ರವ್ಯರಾಶಿಯ ಮೊತ್ತಕ್ಕೆ ಸಮವಾಗಿರುತ್ತದೆ ಎಂದು ಸಾಧಿಸಿದರು. ರಾಸಾಯನಿಕ ಕ್ರಿಯೆಯಲ್ಲಿ ಉಂಟಾಗುವ ಅಣುಗಳ ಸಂಖ್ಯೆ ಉತ್ಪನ್ನಗಳಲ್ಲಿ ಎಷ್ಟು ಇರುತ್ತದೊ ಅಷ್ಟೇ ಪ್ರಮಾಣದ ಅಣುಗಳ ಪ್ರತಿವರ್ತಕದಲ್ಲೂ ಇರುತ್ತದೆ.
ದ್ರವ್ಯರಾಶಿ ಸಂರಕ್ಷಣ ನಿಯಮ ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ದ್ರವ್ಯರಾಶಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶ ಪಡಿಸಲೂ ಸಾಧ್ಯವಿಲ್ಲ.
ಉದಾಹರಣೆ: ನೀರಿನ ಅಣುವಿನ ರಚನೆ ಬಗ್ಗೆ ತಿಳಿಯೋಣ.ಹೈಡೋಜನ್ ಅಕ್ಸಿಜನೊಂದಿಗೆ ಸಂಯೋಜನೆ ಹೊಂದಿ ನೀರಿನ ಅಣು ಉಂಟಾಗುತ್ತದೆ.
ಪ್ರತಿವರ್ತಕಗಳ ದ್ರವ್ಯರಾಶಿ
ಹೈಡೋಜನ್ ಪರಮಾಣು ದ್ರವ್ಯರಾಶಿ = 1.008 ಗ್ರಾಂ
ಹೈಡೋಜನ್ ಅಣು ದ್ರವ್ಯರಾಶಿ = 2.016 ಗ್ರಾಂ
ಹೈಡೋಜನ್ 2 ಅಣು ದ್ರವ್ಯರಾಶಿ = 2*2.016=4.032 ಗ್ರಾಂ
ಆಕ್ಸಿಜನ್ ಪರಮಾಣು ದ್ರವ್ಯರಾಶಿ = 15.99 ಗ್ರಾಂ
ಆಕ್ಸಿಜನ್ ಅಣು ದ್ರವ್ಯರಾಶಿ = 2*15.999=31.998 ಗ್ರಾಂ
ಪ್ರತಿವರ್ತಕಗಳ ಒಟ್ಟು ದ್ರವ್ಯರಾಶಿ = 4.023+31.998 ಗ್ರಾಂ
=36.030ಗ್ರಾಂ
ಉತ್ಪನ್ನಗಳ ದ್ರವ್ಯರಾಶಿ
ನೀರಿನ ಅಣು ದ್ರವ್ಯರಾಶಿ = 1.008 ಗ್ರಾಂ + 15.999 ಗ್ರಾಂ = 18.015 ಗ್ರಾಂ
ಉತ್ಪನ್ನಗಳ ಒಟ್ಟು ದ್ರವ್ಯರಾಶಿ = 2*18.015 = 36.030 ಗ್ರಾಂ
ಉದಾಹರಣೆ: ನೀರಿನ ಅಣುವಿನ ರಚನೆ ಬಗ್ಗೆ ತಿಳಿಯೋಣ. ಹೈಡ್ರೋಜನ್ ಆಕ್ಸಿಜನ್ ನೊಂದಿಗೆ ಸಂಯೋಜನೆ ಹೊಂದಿ ನೀರಿನ ಅಣು ಉಂಟಾಗುತ್ತದೆ.
ಈ ಸಂದರ್ಭದಲ್ಲಿ ಪ್ರತಿವರ್ತಕಗಳ ಒಟ್ಟು ದ್ರವ್ಯರಾಶಿ = ಉತ್ಪನ್ನಗಳ ಒಟ್ಟು ದ್ರವ್ಯರಾಶಿ. ಹಾಗೇಯೆ ಹೈಡ್ರೋಜನ್ ಆಕ್ಸಿಜನ್ ಅಣುಗಳ ಸಂಖ್ಯೆ ಪ್ರತಿವರ್ತಕ, ಉತ್ಪನ್ನಗಳ ಸಂದರ್ಭದಲ್ಲಿ ಒಂದೇ ಆಗಿರುತ್ತದೆ.
ಕಾರ್ಬನ್ ಆಕ್ಸಿಜನ್ ಅಣುವಿನೊಂದಿಗೆ ಕಡಿಮೆ ಸಾರೀಕರಣಗೊಂಡು ಕಾರ್ಬನ್ ಮಾನಾಕ್ಸೈಡ್ ಉಂಟಾಗುತ್ತದೆ.
ಪ್ರತಿವರ್ತಕಗಳ ದ್ರವ್ಯರಾಶಿ
ಹೈಡ್ರೋಕ್ಲೋರಿಕ್ ಆಮ್ಲವು ದ್ರವ್ಯರಾಶಿ = 1.008ಗ್ರಾಂ+35.453ಗ್ರಾಂ = 36.461ಗ್ರಾಂ
ಸೋಡಿಯಂ ಹೈಡ್ರಾಕ್ಸೈಡ್ ದ್ರವ್ಯರಾಶಿ = 22.989+15.999+1.008 = 39.996ಗ್ರಾಂ
ಪ್ರತಿವರ್ತಕಗಳ ಒಟ್ಟು ದ್ರವ್ಯರಾಶಿ = 36.461ಗ್ರಾಂ+39.996ಗ್ರಾಂ = 76.457ಗ್ರಾಂ
ಉತ್ಪನ್ನಗಳ ದ್ರವ್ಯರಾಶಿ
ಸೋಡಿಯಂ ಕ್ಲೋರೈಡ್ ದ್ರವ್ಯರಾಶಿ= 22.989+35.453=58.442ಗ್ರಾಂ
ನೀರಿನ ದ್ರವ್ಯರಾಶಿ = (2*1.008)+15.999 = 18.015ಗ್ರಾಂ
ಉತ್ಪನ್ನಗಳ ಒಟ್ಟು ದ್ರವ್ಯರಾಶಿ = 58.442+18.015 = 76.457ಗ್ರಾಂ
ಈ ಸಂದರ್ಭದಲ್ಲಿ ಪ್ರತಿವರ್ತಕಗಳ ಒಟ್ಟು ದ್ರವ್ಯರಾಶಿ = ಉತ್ಪನ್ನಗಳ ಒಟ್ಟು ದ್ರವ್ಯರಾಶಿ. ಹಾಗೇಯೆ ಕಾರ್ಬನ್ ಆಕ್ಸಿಜನ್ ಅಣುಗಳ ಸಂಖ್ಯೆ ಪ್ರತಿವರ್ತಕ, ಉತ್ಪನ್ನಗಳ ಸಂದರ್ಭದಲ್ಲಿ ಒಂದೇ ಆಗಿರುತ್ತದೆ.
ಹೈಡ್ರೋಕ್ಲೋರಿಕ್ ಆಮ್ಲವು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿ ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ.
ಈ ಸಂದರ್ಭದಲ್ಲಿ ಪ್ರತಿವರ್ತಕಗಳ ಒಟ್ಟು ದ್ರವ್ಯರಾಶಿ = ಉತ್ಪನ್ನಗಳ ಒಟ್ಟು ದ್ರವ್ಯರಾಶಿ.