Description

ದ್ರವ್ಯ ಎಂದರೇನು ?

ಸಾಮಾನ್ಯವಾಗಿ ಯಾವ ವಸ್ತುಗಳು ರಾಶಿ ಹಾಗೂ ಗಾತ್ರವನ್ನು ಹೊಂದಿದೆಯೋ ಅದನ್ನು ದ್ರವ್ಯ ಎನ್ನುವರು. ದ್ರವ್ಯವು ಸಣ್ಣ ಕಣಗಳಿಂದ ಮಾಡಲ್ಪಟ್ಟಿದೆ. ಗಾಳಿ, ಆಹಾರ,ಪ್ರಾಣಿಗಳು, ನಕ್ಷತ್ರಗಳು ಮತ್ತು ಎಲ್ಲವೂ ದ್ರವ್ಯವೇ. ಸಾಮಾನ್ಯವಾಗಿ ದ್ರವ್ಯವು ಮೂರು ಸ್ಥಿತಿಯಲ್ಲಿ ದೊರೆಯುತ್ತದೆ. – ಘನ, ದ್ರವ ಮತ್ತು ಅನಿಲ. ಕಣಗಳ ಗುಣಗಳ ಆಧಾರದ ಮೇಲೆ ಅವುಗಳ ಸ್ಥಿತಿಗಳು ನಿರ್ಧರಿಸಲ್ಪಡುತ್ತದೆ.

ಘನ ಸ್ಥಿತಿ ಎಂದರೇನು ?

ಘನ ವಸ್ತುಗಳ ಸಂಶ್ಲೇಷಣೆ, ರಚನೆ ಹಾಗೂ ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ರಸಾಯನಶಾಸ್ತ್ರದ ಒಂದು ವಿಭಾಗವನ್ನು ಸಾಲಿಡ್ ಸ್ಟೇಟ್ ಕೆಮಿಸ್ಟ್ರಿ ಎಂದು ಕರೆಯುತ್ತಾರೆ. ಘನ ವಸ್ತುಗಳಿಗೆ ನಿರ್ದಿಷ್ಟ ಗಾತ್ರ ಮತ್ತು ಆಕಾರವಿರುತ್ತದೆ. ಬಾಹ್ಯ ಬಲದ ನಡುವೆಯೂ ಕೂಡಾ ಘನವಸ್ತುಗಳು ತಮ್ಮ ಆಕಾರವನ್ನು ಉಳಿಸಿಕೊಳ್ಳುತ್ತದೆ. ದ್ರ್ವಗಳ ರೀತಿಯಲ್ಲಿ ಘನವಸ್ತುಗಳು ಪಾತ್ರೆಯ ಆಕಾರವನ್ನು ಹೊಂದುವುದಿಲ್ಲ. ಘನ ವಸ್ತುವಿನಲ್ಲಿರುವ ಅಣುಗಳು, ಪರಮಾಣುಗಳು ಅಥವಾ ಅಯಾನ್ ಗಳು ಕ್ರಮಬದ್ಧ ಪುನರಾವರ್ತಿಸಿದ ಜೋಡಣೆಯನ್ನು (ಸ್ಫಟಿಕೀಯ ಘನ),  ಅಥವಾ ಅನಿಯಮಿತವಾದ ( ಅಸ್ಫಟಿಕ ಘನ ) ಜೋಡಣೆಯನ್ನು ಹೊಂದಿದೆ.

ದ್ರವ ಸ್ಥಿತಿ ಎಂದರೇನು ?

ದ್ರವ ವಸ್ತುಗಳಿಗೆ ನಿರ್ದಿಷ್ಠ ಆಕಾರವಿರುವುದಿಲ್ಲ ಆದರೆ ನಿರ್ದಿಷ್ಠ ಗಾತ್ರವಿರುತ್ತದೆ. ಅದು ಯಾವ ಪಾತ್ರೆಯಲ್ಲಿರುತ್ತದೆಯೋ ಆ ಪಾತ್ರೆಯ ಆಕಾರವನ್ನು ಪಡೆಯುತ್ತದೆ. ದ್ರವ ವಸ್ತುಗಳು ಹರಿಯುವುದರಿಂದ ಅದು ಆಕಾರವನ್ನು ಬದಲಿಸುತ್ತದೆ ಮತ್ತು ಅದು ಕಠಿಣವಾಗಿರುವುದಿಲ್ಲ. ದ್ರವ ವಸ್ತುವಿನಲ್ಲಿ ಅಣುಗಳ ನಡುವಿನ ಸ್ಥಳ ಘನ ವಸ್ತುಗಳಿಗಿಂತ ಹೆಚ್ಚಾಗಿರುತ್ತದೆ. ಸಾಧಾರಣ ಸಂದರ್ಭದಲ್ಲಿ ನೀರು, ಎಥೆನಾಲ್ ಮುಂತಾದವುಗಳು ದ್ರವ ಸ್ಥಿತಿಯಲ್ಲಿರುತ್ತದೆ. ದ್ರವ ವಸ್ತುವಿನ ಸಾಂದ್ರತೆಯು ಘನ ವಸ್ತುವಿನ ಸಾಂದ್ರತೆಗೆ ಹತ್ತಿರವಿದ್ದು, ಅನಿಲ ವಸ್ತುವಿಗಿಂತ ಹೆಚ್ಚಾಗಿರುತ್ತದೆ.

ಅನಿಲ ಸ್ಥಿತಿ ಎಂದರೇನು ?

ಅನಿಲ ಸ್ಥಿತಿಯಲ್ಲಿ ಕಣಗಳು ಯಾವುದೇ ರೀತಿಯಲ್ಲೂ ವ್ಯವಸ್ಥಿತವಾಗಿ ಜೋಡಣೆ ಹೊಂದಿರುವುದಿಲ್ಲ. ಅವುಗಳಿಗೆ ನಿರ್ದಿಷ್ಠ ಆಕಾರ ವಿರುವುದಿಲ್ಲ. ಅನಿಲ ವಸ್ತುವಿನಲ್ಲಿ ಅಣುಗಳು ಯಾದೃಚ್ಚಿಕವಾಗಿ ಚಲಿಸಿ, ಪಾತ್ರೆಯ ಗೋಡೆಗಳಿಗೆ ಹೊಡೆದು ಪಾತ್ರೆಯಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಘನ ಹಾಗೂ ದ್ರವ ವಸ್ತುಗಳಿಗೆ ಹೋಲಿಸಿದರೆ ಅನಿಲ ವಸ್ತುಗಳು ಹೆಚ್ಚು ಸಂಕುಚಿತ ಹೊಂದುತ್ತವೆ. ಈ ಸಂಕುಚನೆ ಹೊಂದಬಲ್ಲ ಗುಣದಿಂದಲೇ ಅನಿಲವಸ್ತುಗಳನ್ನು ಹೆಚ್ಚು ಗಾತ್ರದಲ್ಲಿ ಸಂಕುಚಿತ ಹೊಂದಿಸಿ ಅವುಗಳನ್ನು ಸಿಲಿಂಡರ್ ನಲ್ಲಿ ತುಂಬಿಸಿ ಸಾಗಿಸಬಹುದು. ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್  (LPG) ಮತ್ತು ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಸಿಲೆಂಡರ್ ಗಳು ಸಂಕುಚಿತ ಹೊಂದಿರುವ ಅನಿಲಕ್ಕೆ ಉದಾಹರಣೆ.

ದ್ರವ್ಯದ  ಸ್ಥಿತಿಗಳ ಬದಲಾವಣೆ :

ನಿಗದಿತ ತಾಪಮಾನ ಮತ್ತು ಒತ್ತಡಗಳಲ್ಲಿ ದ್ರವ್ಯವು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ  ಬದಲಾವಣೆ ಹೊಂದುತ್ತದೆ.

ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾವಣೆ ಕೆಳಗಿನ ರೀತಿಯಲ್ಲಿ ಹೊಂದುತ್ತದೆ.

 

 

  •  ಕೂಡುವಿಕೆ   ಹಾಗೂ ಘನೀಕರಣ
  • ಘನವಸ್ತುವು ದ್ರವವಾಗಿ ಬದಲಾವಣೆ ಹೊಂದುವುದನ್ನು ಕೂಡುವಿಕೆ ಹಾಗೂ ವಿಲೋಮ ವಿಧಾನವನ್ನು ಘನೀಕರಣ ಎನ್ನುವರು.
  • ಆವೀಕರಣ ಮತ್ತು ಸಂಕ್ಷೇಪಣ
  • ದ್ರವವಸ್ತುವು ಅನಿಲವಾಗಿ ಬದಲಾವಣೆ ಹೊಂದುವುದನ್ನು ಆವೀಕರಣ ಹಾಗೂ ವಿಲೋಮ ವಿಧಾನವನ್ನು ಸಂಕ್ಷೇಪಣ ಎನ್ನುವರು.
  • ಉತ್ಪತನ
  • ಕೆಲವು ಘನವಸ್ತುಗಳು ಕಾಯಿಸಿದಾಗ ಅವು ನೇರವಾಗಿ ಆವಿಯಾಗಿ ಬದಲಾಗುತ್ತದೆ ಹಾಗೂ ಆವಿಯನ್ನು ತಂಪಾಗಿಸಿದಾಗ ಘನವಸ್ತುವಾಗಿ ಬದಲಾವಣೆ ಹೊಂದುತ್ತದೆ.
  • ಬಲಭಾಗದಲ್ಲಿರುವ ಚಿತ್ರವು ದ್ರವ್ಯಗಳ ನಡುವಿನ ಬದಲಾವಣೆಗಳನ್ನು ತೋರಿಸುತ್ತದೆ.

ಮಿಶ್ರಣ

ನಮ್ಮ ಪರಿಸರದಲ್ಲಿರುವ ದ್ರವ್ಯವು ಎರಡು ಅಥವಾ ಹೆಚು ಘಟಕಗಳ ಮಿಶ್ರಣಗಳಿಂದ ಉಂಟಾಗಿವೆ. ಉದಾ : ಹಾಲು, ಮರಳು, ಸಮುದ್ರದ ನೀರು ಮುಂತಾದವುಗಳು. ಮಿಶ್ರಣಗಳು ಅವುಗಳ ಘಟಕಗಳ ಗುಣಗಳನ್ನು ತೋರಿಸುತ್ತವೆ. ಮಿಶ್ರಣಗಳ ಘಟಕಗಳನ್ನು ಕೆಲವು ಭೌತ ವಿಧಾನಗಳಾದ ಕೈಗಳಿಂದ ಆರಿಸುವಿಕೆ, ಶೋಧಿಸುವಿಕೆ, ಮುಂತಾದ ವಿಧಾನಗಳಿಂದ ಬೇರ್ಪಡಿಸಬಹುದು. ಕೆಲವು ಬಾರಿ ವಿಶೇಷ ತಂತ್ರಗಳಿಂದ ಮಿಶ್ರಣದಲ್ಲಿರುವ ಘಟಕಗಳನ್ನು ಬೇರ್ಪಡಿಸಬಹುದು.

ಅಮೋನಿಯಂ ಕ್ಲೋರೈಡ್, ಮರಳು ಮತ್ತು ಉಪ್ಪಿನ ಮಿಶ್ರಣದಿಂದ ಅವುಗಳ ಘಟಕಗಳನ್ನು ಬೇರ್ಪಡಿಸುವುದು

ಉತ್ಪತನ 

ಘನವಸ್ತುಗಳನ್ನು ಕಾಯಿಸಿದಾಗ ಅವು ನೇರವಾಗಿ ದ್ರವವಾಗಿ ಬದಲಾಗದೇ ಆವಿಯಾಗಿ ಬದಲಾಗುವ ಕ್ರಿಯೆಯನ್ನು ಉತ್ಪತನ ಎನ್ನುವರು. ಉತ್ಪತನ ಹೊಂದಬಲ್ಲ ವಸ್ತುವನ್ನು ಹೊಂದಿರುವ ಮಿಶ್ರಣದಿಂದ ಬೇರ್ಪಡಿಸಲು ಉತ್ಪತನ ಕ್ರಿಯೆಯನ್ನು ಬಳಸುತ್ತಾರೆ. ಅಮೋನಿಯಂ ಕ್ಲೋರೈಡ್ ಕಾಯಿಸಿದಾಗ ನೇರವಾಗಿ ಆವಿಯಾಗಿ ಬದಲಾಗುತ್ತದೆ. ಆವಿಯಾದ ಅಮೋನಿಯಂ ಕ್ಲೋರೈಡ್ ಅನ್ನು ತಂಪಾಗಿಸಿ ಘನವಸ್ತುವಾಗಿ ಪಡೆಯಬಹುದು. ಉದಾಹರಣೆ : ಕರ್ಪೂರ, ನ್ಯಾಪ್ತಲೀನ್, ಅಂತ್ರಸೀನ್, ಅಯೋಡೀನ್ ಮುಂತಾದವುಗಳು

ಮಿಕ್ಕ ಘಟಕಗಳು ಉಪ್ಪು ಮತ್ತು ಮರಳು, ಉಪು ನೀರಿನಲ್ಲಿ ಕರಗುತ್ತದೆ ಹಾಗೂ ಮರಳು ಕರಗುವುದಿಲ್ಲ. ಆದ್ದರಿಂದ ಇದನ್ನು ಶೋಧಿಸುವಿಕೆ ಯಿಂದ ಬೇರ್ಪಡಿಸಬಹುದು. ಕರಗದ ಮರಳು ಕಾಗದದಲ್ಲಿ ಉಳಿಯುತ್ತದೆ ಹಾಗೂ ಕರಗಿರುವ ಉಪ್ಪು ಶೋಧಿಸಿದ ದ್ರವದಲ್ಲಿರುತ್ತದೆ.

ಆವೀಕರಣ ವಿಧಾನ

ಉಪ್ಪನ್ನು ಉಪ್ಪಿನ ನೀರಿನಿಂದ ಬೇರ್ಪಡಿಸಲು ಆವೀಕರಣ ವಿಧಾನವನ್ನು ಬಳಸುತ್ತಾರೆ. ಕಾಯಿಸಿದಾಗ ಉಪ್ಪು ವಿಭಜನೆಹೊಂದುವುದಿಲ್ಲ. ನೀರು ಮಾತ್ರ ಆವಿಯಾಗುವುದರಿಂದ ಉಪ್ಪಿನಲ್ಲಿ ಕೆಲವೇ ನೀರಿನ ಅಣುಗಳು ಉಳಿಯುತ್ತವೆ. ಉಪ್ಪನ್ನು ನಂತರ ಸ್ಫಟಿಕೀಕರಣ ಹೊಂದಿ ಸ್ಫಟಿಕ ರೂಪ ಪಡೆಯುತ್ತದೆ.

ಕಲಿವಿನ ಫಲಗಳು 

  1. ವಿದ್ಯಾರ್ಥಿಗಳು ಮಿಶ್ರಣ, ಉತ್ಪತನ , ಶೋಧಿಸುವಿಕೆ ಮತ್ತು ಆವೀಕರಣ ಪದಗಳ ಅರ್ಥ ತಿಳಿಯುವರು.
  2. ಕೆಳಗಿನ ವಿಧಾನಗಳಿಂದ ಘಟಕಗಳನ್ನು ಬೇರ್ಪಡಿಸುವ ವಿಧಾನವನ್ನು ಮಾಡುವ ಕೌಶಲವನ್ನು ಹೊಂದುವರು.
  •  ಉತ್ಪತನ
  • ಶೋಧಿಸುವಿಕೆ
  • ಆವೀಕರಣ

3.ಅಮೋನಿಯಂ ಕ್ಲೋರೈಡ್, ಮರಳು ಮತ್ತು ಉಪ್ಪಿನ ಮಿಶ್ರಣದಿಂದ ಅವುಗಳ ಘಟಕಗಳನ್ನು ಬೇರ್ಪಡಿಸಲು ಸೂಕ್ತ ವಿಧಾನವನ್ನು ಆಯ್ದುಕೊಳ್ಳುವರು.

4. ಕೊಟ್ಟಿರುವ ಮಿಶ್ರಣದ ಘಟಕಗಳ ಭೌತಿಕ ಗುಣಗಳ ಬಗ್ಗೆ ಜ್ಞಾನವನ್ನು ಹೊಂದುವರು.

5.  ಕರಗುವಿಕೆ, ಉತ್ಪತನ ಮುಂತಾದ ಜ್ಞಾನದ ಆಧಾರದ ಮೇಲೆ ಕೊಟ್ಟಿರುವ ಮಿಶ್ರಣವನ್ನು ಬೇರ್ಪಡಿಸುವ ತಂತ್ರವನ್ನು ಅರಿಯುವರು.

6. ಪ್ರಯೋಗಶಾಲೆಯಲ್ಲಿ ಹೇಗೆ ಈ ಮಿಶ್ರಣಗಳ ಬೇರ್ಪಡಿಸುವಿಕೆ ಯನ್ನು ಮಾಡುವರು ಎಂಬುದನ್ನು ಪ್ರಯೋಗದ ಮೂಲಕ ತಿಳಿಯುವರು.