ಮಂಜುಗಡ್ಡೆ ಕರಗುವ ಬಿಂದುವನ್ನು ಕಂಡುಹಿಡಿಯುವುದು.
Class 9: ಮಂಜುಗಡ್ಡೆಯ ಕರಗುವ ಬಿಂದು
Kindly register to read the book. Thank you.!
Description
ಘನವಸ್ತುವಿನ ಕರಗುವ ಬಿಂದುವನ್ನು ವ್ಯಾಖ್ಯಾನಿಸುವಿರಾ?
ಘನವಸ್ತುವು ದ್ರವರೂಪಕ್ಕೆ ಕರಗುವ ತಾಪವನ್ನು ಘನವಸ್ತುವಿನ ಕರಗುವ ಬಿಂದು ಎನ್ನುತ್ತೇವೆ.ಘನವಸ್ತುವಿನ ಕರಗುವ ಬಿಂದುವು ಆ ವಸ್ತುವಿನ ಕಣಗಳ ನಡುವಿನ ಆಕರ್ಷಣಾ ಬಲವನ್ನು ತೋರಿಸುತ್ತದೆ.ಘನ ವಸ್ತುವನ್ನು ಕಾಯಿಸಿದಾಗ ಅದರ ಅಣುಗಳು ಉಷ್ಣವನ್ನು ಹೀರಿಕೊಂಡು ತಮ್ಮ ಚಲನ ಶಕ್ತಿಯನ್ನು ಹೆಚ್ಚುಮಾಡಿಕೊಳ್ಳುತ್ತದೆ.
ಚಲನ ಶಕ್ತಿಯು ಹೆಚ್ಚಿದಂತೆಲ್ಲಾ ಘನವಸ್ತುವಿನ ತಾಪ ಹೆಚ್ಚುತ್ತದೆ.ಇದರ ಪರಿಣಾಮವಾಗಿ ಅಣುಗಳ ನಡುವಿನ ಆಕರ್ಷಣಾ ಬಲ ಕಡಿಮೆಯಾಗುತ್ತದೆ.ಇದರಿಂದ ಅಣುಗಳು ಹೆಚ್ಚು ಹೆಚ್ಚು ದೂರವಾಗುತ್ತದೆ.ಇದರಿಂದ ಅವುಗಳ ಪ್ರಚ್ಛನ್ನ ಶಕ್ತಿಯು ಹೆಚ್ಚಾಗಿರುತ್ತದೆ.ಅದೇ ವಸ್ತುವಿಗೆ ಬೆರಕೆ ಸೇರಿಸಿದರೆ ಕರಗುವ ಬಿಂದು ಕಡಿಮೆಯಾಗುತ್ತದೆ.ಒತ್ತಡವೂ ಸಹ ಕರಗುವ ಬಿಂದುವಿನ ಮೇಲೆ ಪರಿಣಾಮವನ್ನು ವಸ್ತುವಿನ ಮೇಲೆ ಒತ್ತಡ ಹೆಚ್ಚಿದಂತೆಲ್ಲಾ ಕರಗುವ ಬಿಂದು ಕಡಿಮೆಯಾಗುತ್ತದೆ.
ಸಂಯುಕ್ತ ವಸ್ತುವಿನ ಕರಗುವ ಬಿಂದುವನ್ನು ತಿಳಿಯುವುದರಿಂದಾಗುವ ಪ್ರಯೋಜನಗಳೇನು?
ಒಂದು ಸಂಯುಕ್ತ ವಸ್ತುವಿನ ಕರಗುವ ಬಿಂದುವಿನಿಂದ ಆ ವಸ್ತುವನ್ನು ಗುರುತಿಸಬಹುದು. ಅದೇ ರೀತಿ ಘನ ವಸ್ತುವಿನ ಕರಗುವ ಬಿಂದು ತಿಳಿಯುವುದರಿಂದ ಶುದ್ದತೆಯ ಮಟ್ಟ ತಿಳಿಯುತ್ತದೆ.ವಸ್ತುಗಳಿಗೆ ಬೆರಕೆ ಸೇರಿಸಿದಾಗ ಅದರ ಕರಗುವ ಬಿಂದುವು ಅದರ ಶುದ್ಧತೆಯ ರೂಪಕ್ಕಿಂತ ಕಡಿಮೆ ಇರುತ್ತದೆ.ಶುದ್ದ ಹರಳಿನ ರೂಪದ ವಸ್ತುಗಳು ಹಿರಿದಾದ ವಲಯದ ತಾಪದಲ್ಲಿ ಕರಗುತ್ತದೆ.
ಈ ಪ್ರಕ್ರಿಯೆಯ ವಿರುದ್ದ ಪ್ರಕ್ರಿಯೆ ಅಂದರೆ ದ್ರವರೂಪದ ವಸ್ತುವು ಘನರೂಪಕ್ಕೆ ಪರಿವರ್ತನೆಯಾಗುವುದನ್ನು ಘನೀಕರಿಸಿದ ಬಿಂದು ಎನ್ನುತ್ತೇವೆ.ಹಲವಾರು ವಸ್ತುಗಳಿಗೆ ಕರಗುವ ಮತ್ತು ಘನೀಕರಿಸುವ ಬಿಂದು ಒಂದೇ ಆಗಿರುತ್ತದೆ.
ಮಂಜುಗಡ್ಡೆಗೆ ಕರಗುವ ಬಿಂದು 0°C ಅಥವಾ 273K. ಅತೀ ಹೆಚ್ಚು ಕರಗುವ ಬಿಂದುವನ್ನು ಹೊಂದಿರುವ ರಾಸಾಯನಿಕ ವಸ್ತು “ಟಂಗ್ಸ್ಟನ್” (3410°C). ಇದನ್ನು ವಿದ್ಯುತ್ ಬಲ್ಬ್ ಗಳ ಫಿಲಮೆಂಟ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಈ ಹಂತದಲ್ಲಿ ಎಲ್ಲಾ ಮಂಜುಗಡ್ಡೆಗಳು ಕರಗುವವರೆಗೆ ತಾಪವು ಹೆಚ್ಚಳವಾಗುವುದಿಲ್ಲ.ಈ ಪ್ರಕ್ರಿಯೆಯಲ್ಲಿ ನೀಡಿದ ತಾಪವು ಆ ಮಂಜುಗಡ್ಡೆಯ ಅಣುಗಳ ಪ್ರಚ್ಛನ್ನ ಶಕ್ತಿ ಹೆಚ್ಚು ಮಾಡುತ್ತದೆ.ಕರಗುವ ಪ್ರಕ್ರಿಯೆ ಮುಂದುವರೆಯುವವರೆಗೆ ಅಣುಗಳ ಶಕ್ತಿಯು ಹೆಚ್ಚು ಆಗುವುದಿಲ್ಲ ಮತ್ತು ತಾಪವು ಕಡಿಮೆಯಾಗುವುದಿಲ್ಲ.
ಒಂದು ಕೆ.ಜಿ.ಯ ಮಂಜುಗಡ್ಡೆಯನ್ನು ಅದರ ಕರುವ ಬಿಂದುವಿನಲ್ಲಿ,ವಾತಾವರಣದ ಒತ್ತಡದಲ್ಲಿ ಸಂಪೂರ್ಣವಾಗಿ ಕರಗಿಸುವ ಉಷ್ಣವನ್ನು ದ್ರವನ ಗುಪ್ತೋಷ್ಣ(ಲೇಟೆಂಟ್ ಹೀಟ್ ಆಫ್ ಫ್ಯುಜನ್) ಎನ್ನುತ್ತೇವೆ.
ಮಂಜುಗಡ್ಡೆಗೆ ಅದರ ತಾಪದಲ್ಲಿನ ಬೆಲೆ 3.34 x105 J/kg at 0°C.
ಕೆಲವು ವಸ್ತುವಿನ ಕರಗುವ ಬಿಂದುವನ್ನು ಈ ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿದೆ.
Substance – ವಸ್ತು | Melting point (°C)ಕರಗುವ ಬಿಂದು(°C) |
Ice – ಮಂಜುಗಡ್ಡೆ | 0 |
Mercury – ಪಾದರಸ | ~-39 |
Hydrogen – ಜಲಜನಕ | -259 |
Oxygen – ಆಮ್ಲಜನಕ | ~-219 |
Helium – ಹೀಲಿಯಂ | ~-272 |
Glucose – ಗ್ಲೂಕೋಸ್ | 146 |
Iron – ಕಬ್ಬಿಣ | ~1535 |
Silver – ಬೆಳ್ಳಿ | ~961 |
Gold – ಚಿನ್ನ | 1063 |
ಕಲಿವಿನ ಫಲಗಳು
1.ವಿದ್ಯಾರ್ಥಿಗಳು ಈ ಪ್ರಯೋಗದ ಮೂಲಕ ಕರಗುವ ಬಿಂದು ಎನ್ನುವ ಪದದ ಅರ್ಥ ತಿಳಿಯುವರು.
2. ವಿದ್ಯಾರ್ಥಿಗಳು ಪ್ರಯೋಗಕ್ಕಾಗಿ ಮಂಜುಗಡ್ಡೆಗಳನ್ನು ಬಳಸುವರು ಮತ್ತು ಅದು ಕರಗುವ ಸಂರ್ಭದಲ್ಲಿ ಅದರ ಭೌತಿಕ ಲಕ್ಷಣದಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರುತಿಸುವರು.
3.ಬೇರೆ ಬೇರೆ ಹಂತಗಳನ್ನು ಅರ್ಥಮಾಡಿಕೊಂಡ ನಂತರ ವಿದ್ಯಾರ್ಥಿಗಳು ನೈಜ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸುವರು.
4.ಘನ ವಸ್ತುವು ಕರಗುವ ಸಂದರ್ಭದಲ್ಲಿ ಅದರ ತಾಪವು ಸ್ಥಿರವಾಗಿರುತ್ತದೆ ಎಂದು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವರು.
Additional information
Author | |
---|---|
Language | |
Publisher | |
Year |