Description
ಸಿದ್ದಾಂತ
ದ್ರಾವಣ ಎಂದರೇನು?
ದ್ರಾವಣವೆಂದರೆ ಎರಡು ಅಥವಾ ಹೆಚ್ಚು ಪದಾರ್ಥಗಳ ಏಕರೂಪದಲ್ಲಿ ಕರಗಿರುವ ಮಿಶ್ರಣ. ಅದರಲ್ಲಿರುವ ದೊಡ್ಡ ಪ್ರಮಾಣದ ಘಟಕವನ್ನು ದ್ರಾವಕ ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದ ಘಟಕವನ್ನು ದ್ರವ್ಯ ಎಂದು ಕರೆಯಲಾಗುತ್ತದೆ.
ನಿರ್ದಿಷ್ಟಪಡಿಸಿದ ಉಷ್ಣಾಂಶ ಮತ್ತು ಒತ್ತಡ ಪರಿಸ್ಥಿತಿಗಳಲ್ಲಿ (ಉದಾಹರಣೆಗೆ: ಕೊಠಡಿಯ ಉಷ್ಣತೆ ಮತ್ತು ಒತ್ತಡದ ಪರಿಸ್ಥಿತಿಗಳು)100ಗ್ರಾಂ ದ್ರಾವಕದಲ್ಲಿ ವಸ್ತುವಿನ ಗರಿಷ್ಟ ರಾಶಿಯು ಕರಗಿದರೆ ಅದನ್ನು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಆ ವಸ್ತುವಿನ ದ್ರಾವಕತೆ ಎಂದು ಕರೆಯಬಹುದು. ಹೀಗೆ ಪಡೆದ ದ್ರಾವಣವನ್ನು ಪರ್ಯಾಪ್ತ ದ್ರಾವಣ ಎಂದು ಕರೆಯಲಾಗುವುದು.
ಪರ್ಯಾಪ್ತ ದ್ರಾವಣವೆಂದರೇನು?
ಇದರರ್ಥ ಕೊಟ್ಟಿರುವ ಉಷ್ಣತೆ ಮತ್ತು ಒತ್ತಡದಲ್ಲಿ ದ್ರವ್ಯವು ಸಂಪೂರ್ಣವಾಗಿ ದ್ರಾವಕದಲ್ಲಿ ಕರಗುವುದು. ದ್ರಾವಕತೆಯು ಉಷ್ಣಾಂಶ ಮತ್ತು ಒತ್ತಡಗಳೊಂದಿಗೆ ಬದಲಾಗುತ್ತದೆ. ಉದಾಹರಣೆಗೆ, ತಾಪಮಾನದ ಏರಿಕೆಯಾದಂತೆ ಉಪ್ಪು / ಸಕ್ಕರೆಯ ದ್ರಾವಕತೆ ಹೆಚ್ಚಾಗುತ್ತದೆ. ನಿರ್ದಿಷ್ಟಪಡಿಸಿದ ಪರಿಸ್ಥಿತಿಗಳಲ್ಲಿ ದ್ರಾವಕದಲ್ಲಿ ಯಾವುದೇ ದ್ರವ್ಯವು ಸಂಪೂರ್ಣವಾಗಿ ಕರಗಿರುವ ದ್ರಾವಣವನ್ನು ಪರ್ಯಾಪ್ತ ದ್ರಾವಣ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಕಂಡು ಬರುವ ದ್ರಾವಣಗಳು ಪರ್ಯಾಪ್ತವಲ್ಲ. ಅವು ಸಣ್ಣ ಪ್ರಮಾಣದ ದ್ರವ್ಯವನ್ನು ಹೊಂದಿರುತ್ತವೆ. ಇಂತಹ ದ್ರಾವಣಗಳ ಸಂಯೋಜನೆಗಳನ್ನು ಸಾಂದ್ರತೆ ಎಂದು ಪರಿಗಣಿಸಲಾಗುತ್ತದೆ. ಅಂದರೆ ದ್ರಾವಣದಲ್ಲಿ ಕರಗಿಸಿರುವ ದ್ರವ್ಯದ ನಿರ್ದಿಷ್ಟ ತೂಕ ಅಥವಾ ಗಾತ್ರದ ಪರಿಮಾಣ ಎಂದು ಉಲ್ಲೇಖಿಸಲಾಗುತ್ತದೆ. ಸಾಂದ್ರತೆಯನ್ನು ರಾಶಿಯಿಂದಲೋ ಅಥವಾ ಮೋಲ್ ನಿಂದಲೋ ವ್ಯಕ್ತಪಡಿಸಬಹುದು. ಒಂದು ಲೀ ದ್ರಾವಣದಲ್ಲಿರುವ ದ್ರವ್ಯದ ಮೋಲ್ ಸಂಖ್ಯೆಯನ್ನು ಆ ದ್ರಾವಣದ ಮೊಲಾರಿಟಿ ಎನ್ನುತ್ತೇವೆ. 1000ಮಿ.ಲೀ ದ್ರಾವಣದಲ್ಲಿ 58.5 ಗ್ರಾಂ NaCl (Na = 23 + Cl = 35. 5) ಎಂದಾದರೆ, ಇದು 1M (1 ಮೋಲಾರ್) NaCl ದ್ರಾವಣ ಎಂದು ಕರೆಯಲ್ಪಡುತ್ತದೆ.
ಪ್ರಸರಣವು ಏಕರೂಪ (ದ್ರಾವಣ)ಅಥವಾ ಸಮ್ಮಿಶ್ರ(ನಿಲಂಬನ ಅಥವಾ ಕಲಿಲ) ವಸ್ತುವನ್ನು ಉತ್ಪತ್ತಿ ಮಾಡುತ್ತದೆ.ವ್ಯತ್ಯಾಸವು ಹಂಚಿಕೆಯಾಗಿರುವ ಕಣಗಳ ಗಾತ್ರವನ್ನು ಅವಲಂಬಿಸಿದೆ.
ನಿಲಂಬನದಲ್ಲಿ, ಕಣದ ಗಾತ್ರ 10-5 cm ಅಥವಾ ದೊಡ್ಡದಾಗಿದೆ.ಕಣಗಳು ಬರಿಯ ಕಣ್ಣಿನಿಂದ ಅಥವಾ ಸಾಮಾನ್ಯ ಸೂಕ್ಷ್ಮದರ್ಶಕದ ಅಡಿಯಲ್ಲಿ ಪ್ರಸರಣ ಮಾಧ್ಯಮದಲ್ಲಿ(ದ್ರಾವಕ) ಸ್ಪಷ್ಟವಾಗಿ ಕಾಣಬಹುದು.ನಿಲಂಬನಗಳು ಸ್ಥಿರವಾದುದಲ್ಲ. ತೇಲುತ್ತಿರುವ ಕಣಗಳು ಸ್ವಲ್ಪ ಸಮಯದ ನಂತರ ತಳ ಸೇರುತ್ತವೆ. ಉದಾ. ಕೆಸರು ಮಣ್ಣು ಅಥವಾ ಗಾಳಿಯಲ್ಲಿರುವ ಹೊಗೆ.
ಕಲಿಲಗಳ ಕಣಗಳು 10-5cm ಗಿಂತ ಚಿಕ್ಕದಾಗಿದೆ (ಸಾಮಾನ್ಯವಾಗಿ 10-7 ರಿಂದ 10-5 cm). ಹಂಚಲಾಗಿರುವ ಕಣವನ್ನು ಬೇರ್ಪಡಿಸಲು ಬಹಳ ಕಡಿಮೆ ಪ್ರವೃತ್ತಿ ತೋರಿಸುತ್ತವೆ. ಕಲಿಲ ಕಣಗಳನ್ನು ಬರಿಯ ಕಣ್ಣಿನಿಂದ ಅಥವಾ ಸಾಮಾನ್ಯ ಸೂಕ್ಷ್ಮದರ್ಶಕದಲ್ಲಿ ನೋಡಲು ಸಾಧ್ಯವಿಲ್ಲ.
ಕಲಿಲಗಳು ಸ್ಥಿರವಾಗಿರುತ್ತವೆ. ಗಮ್, ಹಾಲು ಮತ್ತು ರಕ್ತ ಇವುಗಳು ವಿಶಿಷ್ಟ ಕಲಿಲಗಳಾಗಿವೆ.
ಒಂದು ದ್ರಾವಣದಲ್ಲಿ, ಕಣಗಳು ಅಣುವಿನ ಆಯಾಮಗಳಂತಿದ್ದು, 10-7cm ಗಿಂತ ಚಿಕ್ಕದಾಗಿದೆ. ದ್ರಾವಣಗಳು ಪಾರದರ್ಶಕ ಮತ್ತು ಏಕರೂಪದಲ್ಲಿವೆ. ಒಂದು ದ್ರಾವಣದಲ್ಲಿ,ದ್ರವ್ಯದ ಶೇಕಡಾವಾರು ರಾಶಿಯು 100 ಮೈನಸ್ ದ್ರಾವಕದ ಶೇಕಡಾವಾರು ರಾಶಿಗೆ ಸಮಾನವಾಗಿರುತ್ತದೆ
ದ್ರವ್ಯದ ಶೇಕಡಾ ರಾಶಿ = 100 – ದ್ರಾವಕದ ಶೇಕಡಾ ರಾಶಿ
ನೀರಿನಲ್ಲಿ ಅದರ ದ್ರಾವಣದ ದ್ರವ್ಯದ ಶೇಕಡಾ ರಾಶಿ ಕಂಡುಹಿಡಿಯಲು, ನಾವು ಕೆಳಗಿನ ಸೂತ್ರವನ್ನು ಅನ್ವಯಿಸುತ್ತೇವೆ:
ದ್ರಾವಣದ ಶೇಕಡಾ ರಾಶಿ = (ದ್ರವ್ಯದ ರಾಶಿ) / (ದ್ರವ್ಯದ ರಾಶಿ + ನೀರಿನ ರಾಶಿ) ×100
ಕೊಠಡಿ ಉಷ್ಣಾಂಶ ಮತ್ತು ಒತ್ತಡದಲ್ಲಿ ನೀರಿನ ರಾಶಿಯು ಮಿ.ಲೀನಲ್ಲಿ ಅಳತೆ ಮಾಡಿದ ಗಾತ್ರ ಯಾವಾಗಲೂ ಸಮಾನವಾಗಿರುತ್ತದೆ. ಉದಾಹರಣೆಗೆ, 50 ಮಿಲಿ ನೀರಿನ ರಾಶಿ 50 ಗ್ರಾಂ ಗೆ ಸಮಾನವಾಗಿರುತ್ತದೆ. ಏಕೆಂದರೆ
ನೀರಿನ ರಾಶಿ = ನೀರಿನ ಗಾತ್ರ × ನೀರಿನ ಸಾಂದ್ರತೆ
= 50ಮಿ.ಲೀ×1.00ಗ್ರಾಂ/ಮಿ.ಲೀ
ಕಲಿವಿನ ಫಲಗಳು
- ವಿದ್ಯಾರ್ಥಿಗಳು ಈ ಪದಗಳನ್ನು ಅರ್ಥೈಸಿಕೊಳ್ಳುತ್ತಾರೆ: ನೈಜ ದ್ರಾವಣ, ನಿಲಂಬನ, ಕಲಿಲ, ಪಾರದರ್ಶಕತೆ, ಶೋಧಕತೆ(filterability), ಸ್ಥಿರತೆ, ಇತ್ಯಾದಿ
- ವಿದ್ಯಾರ್ಥಿಗಳು ಈ ಪ್ರಯೋಗಗಳ ಮೂಲಕ ನೈಜ ದ್ರಾವಣ, ನಿಲಂಬನ ಮತ್ತು ಕಲಿಲಗಳ ವ್ಯತ್ಯಾಸ ಗುರ್ತಿಸುತ್ತಾರೆ:
- ಪಾರದರ್ಶಕತೆ
- ಶೋಧಿಸುವಿಕೆ
- ಸ್ಥಿರತೆ
- ವಿದ್ಯಾರ್ಥಿಗಳು ಪ್ರಯೋಗದ ಮಾಹಿತಿಯನ್ನು ಆಧರಿಸಿ ಕೊಟ್ಟಿರುವ ಮಿಶ್ರಣವನ್ನು ನೈಜ ದ್ರಾವಣ, ನಿಲಂಬನ ಮತ್ತು ಕಲಿಲಗಳ ವರ್ಗೀಕರಿಸುತ್ತಾರೆ.
- ವಿದ್ಯಾರ್ಥಿಗಳು ನೈಜ ದ್ರಾವಣ, ನಿಲಂಬನ ಮತ್ತು ಕಲಿಲಗಳ ಪಾರದರ್ಶಕತೆ, ಶೋಧನೆ ಮಾನದಂಡ ಮತ್ತು ಸ್ಥಿರತೆಗಳನ್ನು ಪರೀಕ್ಷಿಸುವ ಪ್ರಯೋಗಗಳನ್ನು ಮಾಡಲು ಕೌಶಲಗಳನ್ನು ಗಳಿಸಿದ್ದಾರೆ.