ಸ್ಲಿಂಕಿ ( ಹಿಗ್ಗಿಸಿದ ಸ್ಪ್ರಿಂಗ್ ) ನಲ್ಲಿ ಒಂದು ಕಂಪನದ ವೇಗವನ್ನು ಕಂಡುಹಿಡಿಯುವುದು.
ಸ್ಲಿಂಕಿ ( ವಿರಳಗೊಳಿಸಿದ ಸ್ಪ್ರಿಂಗ್ ) ಯಲ್ಲಿ ಕಂಪನದ ವೇಗ
Kindly register to read the book. Thank you.!
Description
ಸ್ಲಿಂಕಿ ಎಂದರೇನು ?
ಸ್ಟೀಲಿನಿಂದ ಮಾಡಿದ ಉದ್ದವಾದ ಸುರುಳಿಯಾಕಾರದ ಸ್ಪ್ರಿಂಗ್‌ನ್ನು ಸ್ಲಿಂಕಿ ಎಂದು ಕರೆಯುತ್ತಾರೆ. ಇದು ನಮ್ಯವಾದ ಹಾಗೂ ಗಣನೀಯವಾದ ಸ್ಥಿತಿ ಸ್ಥಾಪಕತೆ ಹೊಂದಿರುತ್ತದೆ. ಇದರ ಒಂದು ತುದಿಯನ್ನು ಸ್ಥಿರಗೊಳಿಸಿ, ಮತ್ತೊಂದು ತುದಿಯನ್ನು ಅದರ ಉದ್ದಕ್ಕೆ ಲಂಬವಾಗಿ ಜಗ್ಗಿದಾಗ ಅದು ಅಡ್ಡ ತರಂಗವನ್ನು ಉಂಟುಮಾಡುತ್ತದೆ ಹಾಗೂ ಅದರ ಸ್ವತಂತ್ರವಾದ ತುದಿಯನ್ನು ಆವರ್ತಕವಾಗಿ ಸಂಕುಚಿಸಿದಾಗ ಅದು ನೀಳ ತರಂಗವನ್ನು ಉಂಟುಮಾಡುತ್ತದೆ. ಯಾವುದೇ ಮಾಧ್ಯಮದಲ್ಲಿನ ಆವರ್ತಕ ಕ್ಷೋಭೆಯನ್ನು ತರಂಗ ಎಂದು ಕರೆಯುತ್ತಾರೆ.
ನೀಳ ತರಂಗ ಎಂದರೇನು ?
ನೀಳ ತರಂಗಗಳಲ್ಲಿ ಮಾಧ್ಯಮದ ಕಣಗಳು ತರಂಗದ ದಿಕ್ಕಿನಲ್ಲಿಯೇ ಹಿಂದಕ್ಕೂ ಹಾಗೂ ಮುಂದಕ್ಕೂ ಕಂಪಿಸುತ್ತವೆ. ಇದರಲ್ಲಿ ಪರ್ಯಾಯವಾಗಿ ಸಂಪೀಡನ ಮತ್ತು ವಿರಳನಗಳಿರುತ್ತವೆ. ಉದಾಹರಣೆ : ಸಂಕುಚಿಸಿದ ಸ್ಪ್ರಿಂಗ್‌ನ ಮೂಲಕ ಉಂಟಾಗುವ ತರಂಗವು ನೀಳ ತರಂಗವಾಗಿದೆ.
ನೀಳ ತರಂಗದ ತರಂಗ ದೂರವನ್ನು ಒಂದು ಪೂರ್ಣ ಸಂಪೀಡನ ಮತ್ತು ಒಂದು ಪೂರ್ಣ ವಿರಳನ ಚಲಿಸಿದ ದೂರ ಅಥವಾ
ಎರಡು ಅನುಕ್ರಮ ಸಂಪೀಡನ ಅಥವಾ ಎರಡು ಅನುಕ್ರಮ ವಿರಳನ ಗಳಿಗಿರುವ ದೂರ ಎಂದು ವ್ಯಾಖ್ಯಾನಿಸಬಹುದು.
ಆವೃತ್ತಿ : ಏಕಮಾನ ಕಾಲದಲ್ಲಿ ಸ್ಲಿಂಕಿಯ ಕಣಗಳಿಂದ ಉಂಟಾಗುವ ಒಟ್ಟು ಕಂಪನವನ್ನು ಆವೃತ್ತಿ ಎಂದು ಕರೆಯುತ್ತಾರೆ. ಅದನ್ನು υ (neu). ಚಿಹ್ನೆಯಿಂದ ಸೂಚಿಸುವರು.
ಒಂದು ತರಂಗ ದೂರವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ತರಂಗ ಅವಧಿ ( T ) ಎನ್ನುವರು.
ಅಡ್ದ ತರಂಗಗಳೆಂದರೇನು ?
ಮಾಧ್ಯಮದ ಕಣಗಳು ತರಂಗದ ದಿಕ್ಕಿಗೆ ಲಂಬವಾಗಿ ಮೇಲೆ ಮತ್ತು ಕೆಳಗೆ ಕಂಪಿಸಿದಾಗ ಉಂಟಾಗುವ ತರಂಗವನ್ನು ಅಡ್ಡತರಂಗ ಎನ್ನುವರು. ಅಡ್ಡ ತರಂಗವು ಪರ್ಯಾಯ ಉಬ್ಬು ಹಾಗೂ ತಗ್ಗುಗಳನ್ನು ಹೊಂದಿರುತ್ತದೆ. ಕ್ಷೋಭೆಯು ಮುಮ್ಮುಖವಾಗಿ ಪ್ರಸರಿಸಿದಾಗ, ಮಾಧ್ಯಮದ ಕಣಗಳು ಮೇಲ್ಮುಖ ಚಲನೆಯನ್ನು ಹೊಂದುತ್ತದೆ. ಮಾಧ್ಯಮದ ಕಣದ ಗರಿಷ್ಠ ಮೇಲ್ಮುಖ ಸ್ಥಾನ ಪಲ್ಲಟವನ್ನು ಉಬ್ಬು ಎಂದು ಹಾಗೂ ಗರಿಷ್ಠ ಕೆಳಮುಖ ಸ್ಥಾನ ಪಲ್ಲಟವನ್ನು ತಗ್ಗು ಎಂದು ಕರೆಯುತ್ತಾರೆ.
ಅಡ್ಡ ತರಂಗದ ತರಂಗ ದೂರವನ್ನು ಎರಡು ಅನುಕ್ರಮ ಉಬ್ಬುಗಳು (C) ಅಥವಾ ಎರಡು ಅನುಕ್ರಮ ತಗ್ಗುಗಳಿಗಿರುವ ದೂರ (T)
ಅಥವಾ ಒಂದು ಪೂರ್ಣ ಉಬ್ಬು ಮತ್ತು ಒಂದು ಪೂರ್ಣ ತಗ್ಗಿನಲ್ಲಿ ಚಲಿಸಿದ ದೂರ ಎಂದು ವ್ಯಾಖ್ಯಾನಿಸಬಹುದು.
ಸ್ಲಿಂಕಿಯಲ್ಲಿ ಅಥವಾ ಎಳೆದ ಹಗ್ಗದ ಸ್ವತಂತ್ರ ತುದಿಯನ್ನು ಏಕರೀತಿಯಲ್ಲಿ ಮೇಲೆ ಮತ್ತು ಕೆಳಗೆ ಜಗ್ಗಿದಾಗ ಅಡ್ಡ ತರಂಗ ಉಂಟಾಗುತ್ತದೆ.
ತರಂಗ ದೂರ (λ)
ಕೊಟ್ಟಿರುವ ಅವಧಿಯಲ್ಲಿ ಮಾಧ್ಯಮದಲ್ಲಿನ ಕ್ಷೋಭೆಯು ಚಲಿಸಿದ ದೂರವನ್ನು ತರಂಗ ದೂರ ಅಥವಾ ತರಂಗ ಉದ್ದ ಎಂದು ಕರೆಯುತ್ತಾರೆ. ಅದನ್ನು λ ಚಿಹ್ನೆಯಿಂದ ಸೂಚಿಸುತ್ತಾರೆ. ತರಂಗ ದೂರವು ಎರಡು ಅನುಕ್ರಮ ಉಬ್ಬುಗಳು ಅಥವಾ ಎರಡು ಅನುಕ್ರಮ ತಗ್ಗುಗಳಿಗಿರುವ ದೂರಕ್ಕೆ ಸಮವಾಗಿರುತ್ತದೆ. ( ಅಡ್ಡ ತರಂಗದಲ್ಲಿ )
ತರಂಗದ ವೇಗ ಅಥವಾ ಕಂಪನದ ವೇಗ :
ಒಂದು ಸೆಕೆಂಡಿನಲ್ಲಿ ತರಂಗವು ಚಲಿಸಿದ ಒಟ್ಟು ದೂರವನ್ನು ತರಂಗ ವೇಗ ಎನ್ನುವರು.
ತರಂಗವು λ ದೂರವನ್ನು T ಸಮಯದಲ್ಲಿ ಚಲಿಸಿದಾಗ ವೇಗ v
ತರಂಗ ವೇಗ = ತರಂಗದ ಆವೃತ್ತಿ X ತರಂಗ ದೂರ
ಕಲಿಕಾ ಫಲಗಳು
- ಸ್ಲಿಂಕಿಯ ಒಂದು ತುದಿಯನ್ನು ಸ್ಥಿರಗೊಳಿಸಿ, ಮತ್ತೊಂದು ತುದಿಯನ್ನು ಅದರ ಉದ್ದಕ್ಕೆ ಲಂಬವಾಗಿ ಜಗ್ಗಿದಾಗ ಅದರಲ್ಲಿ ಉಬ್ಬು ಹಾಗೂ ತಗ್ಗುಗಳು ಕಾಣಿಸುತ್ತದೆ. ಆದ್ದರಿಂದ ಸ್ಲಿಂಕಿಯಲ್ಲಿ ಉಂಟಾಗುವುದು ಅಡ್ಡ ತರಂಗವಾಗಿರುತ್ತದೆ.
- ಸ್ಲಿಂಕಿಯ ಒಂದು ತುದಿಯನ್ನು ಸ್ಥಿರಗೊಳಿಸಿ, ಅದರ ಸ್ವತಂತ್ರವಾದ ತುದಿಯನ್ನು ಆವರ್ತಕವಾಗಿ ಸಂಕುಚಿಸಿದಾಗ ಅದರಲ್ಲಿ ಸಂಪೀಡನ ಮತ್ತು ವಿರಳನಗಳು ಕಾಣಿಸುತ್ತವೆ ಆದ್ದರಿಂದ ಸ್ಲಿಂಕಿಯಲ್ಲಿ ಉಂಟಾಗುವುದು ನೀಳ ತರಂಗವಾಗಿರುತ್ತದೆ.
Additional information
Author | |
---|---|
Language | |
Publisher | |
Year |