ಸಾಂದ್ರತೆಯನ್ನು ಕಂಡುಹಿಡಿಯಿರಿ

ಸ್ಪಿಂಗ್ ತ್ರಾಸು ಮತ್ತು ಅಳತೆಯ ಜಾಡಿಯನ್ನು ಉಪಯೋಗಿಸಿ ನೀರಿಗಿಂತ ಹೆಚ್ಚಿನ ಸಾಂದ್ರತೆ ಇರುವ ಘನವಸ್ತುವಿನ ಸಾಂದ್ರತೆಯನ್ನು ಕಂಡು ಹಿಡಿಯುವುದು.

Kindly register to read the book. Thank you.!

Description

ಎಲ್ಲಾ ದ್ರವ್ಯವು ರಾಶಿ ಮತ್ತು ಗಾತ್ರ ಹೊಂದಿರುತ್ತದೆ. ರಾಶಿ ಮತ್ತು ಗಾತ್ರ ಭೌತಿಕ ಪರಿಮಾಣಗಳಾಗಿದ್ದು, ವಿವಿಧ ರೀತಿಯ ವಸ್ತುಗಳಿಗೆ ಬೇರೆ ಬೇರೆ ರಾಶಿ ಮತ್ತು ಗಾತ್ರಗಳಿರುತ್ತವೆ. ವಸ್ತುವಿನಲ್ಲಿರುವ ಎಲ್ಲಾ ಅಣುರಾಶಿಗಳ ಒಟ್ಟು ಮೊತ್ತವನ್ನು ರಾಶಿ ಎನ್ನುತ್ತಾರೆ. .ರಾಶಿಯನ್ನು g ಅಥವಾ kg ಯಿಂದ ಸೂಚಿಸುತ್ತೇವೆ. ವಸ್ತುವು ಆಕ್ರಮಿಸಿಕೊಂಡಿರುವ ಸ್ಥಳಾವಕಾಶದ ಅಳತೆಯನ್ನು ಗಾತ್ರ ಎನ್ನುವರು . ಗಾತ್ರವನ್ನು ಲೀಟರ್ ( l ) ಕ್ಯುಬಿಕ್ ಮೀಟರ್ m3 ಗ್ಯಾಲನ್ gal ನಿಂದ ಅಳೆಯುತ್ತೇವೆ.

ಒಂದೇ ರಾಶಿಯನ್ನು ಹೊಂದಿರುವ ಕಬ್ಬಿಣದ ವಸ್ತು ಮತ್ತು ಹತ್ತಿಯನ್ನು ಗಮನಿಸಿದಾಗ, ಕಬ್ಬಿಣವು ಕಡಿಮೆ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತದೆ, ಹತ್ತಿಯು ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಂಡಿರುವುದನ್ನು ಗಮನಿಸುತ್ತೇವೆ. ಈ ವಸ್ತುಗಳ ಸಾಂದ್ರತೆಯಲ್ಲಿನ ವ್ಯತ್ಯಾಸವೇ ಇದಕ್ಕೆ ಕಾರಣ. ಕಬ್ಬಿಣವು ಹತ್ತಿಗಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತದೆ.

 

ಏಕಮಾನ ಗಾತ್ರದಲ್ಲಿರುವ ವಸ್ತುವಿನ ರಾಶಿಯನ್ನು ಸಾಂದ್ರತೆ ಎಂದು ಕರೆಯುತ್ತೇವೆ.

D ಸಮೂಹ M ಮತ್ತು ಪರಿಮಾಣ V ಯ ಸಾಂದ್ರತೆಯಿದ್ದರೆ, ಆಗ

«math xmlns=¨http://www.w3.org/1998/Math/MathML¨»«mi mathvariant=¨normal¨»D«/mi»«mo»§nbsp;«/mo»«mo»=«/mo»«mo»§nbsp;«/mo»«mfrac»«mi mathvariant=¨normal¨»M«/mi»«mi mathvariant=¨normal¨»V«/mi»«/mfrac»«/math»

S.I. ಏಕಮಾನವು:= kg/m3

ಉದಾ,  ನೀರಿನ ಸಾಂದ್ರತೆಯು= 1000kg/m3

ಕಬ್ಬಿಣದ ಸಾಂದ್ರತೆಯು= 8500kg/m3

ಸಾಮಾನ್ಯವಾಗಿ ಎಲ್ಲಾವಸ್ತುಗಳು ಕಾಯಿಸಿದಾಗ ಹಿಗ್ಗುತ್ತದೆ ಹಾಗೂ ತಂಪು ಮಾಡಿದಾಗ ಕುಗ್ಗುತ್ತದೆ, ಆದರೆ ಇದರಿಂದ ಗಾತ್ರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.ವಸ್ತುವಿನ ಉಷ್ಣತೆ ಹೆಚ್ಚಿದಂತೆಲ್ಲಾ ಅದರ ಸಾಂದ್ರತೆ ಕಡಿಮೆಯಾಗುತ್ತದೆ ಹಾಗೂ ಉಷ್ಣತೆ ಕಡಿಮೆಯಾದಂತೆಲ್ಲಾ ಅದರ ಸಾಂದ್ರತೆ ಹೆಚ್ಚಾಗುತ್ತದೆ. ಆದರೆ ನೀರು ಮಾತ್ರ 4°c ಉಷ್ಣತೆ ವರೆಗೆ ಕುಗ್ಗುತ್ತದೆ, 4°c -0°c ವರೆಗೆ ಉಷ್ಣತೆಯನ್ನು ತಗ್ಗಿಸಿದಾಗ ನೀರಿನ ಸಾಂದ್ರತೆಯು ಹೆಚ್ಚುತ್ತದೆ. ನೀರು 4°c ಯಲ್ಲಿ ಗರಿಷ್ಠ ಸಾಂದ್ರತೆಯನ್ನು ಹೊಂದಿರುತ್ತದೆ.

ಸಾಪೇಕ್ಷ ಸಾಂದ್ರತೆ ಯಾವುದೇ ವಸ್ತುವಿನ ಸಾಂದ್ರತೆ ಹಾಗೂ 4°c ಉಷ್ಣತೆಯಲ್ಲಿನ ನೀರಿನ ಸಾಂದ್ರತೆಯ ನಡುವಿನ ಅನುಪಾತವನ್ನು ಸಾಪೇಕ್ಷ ಸಾಂದ್ರತೆ ಎಂದು ಕರೆಯುತ್ತೇವೆ. ಇದನ್ನು ವಿಶಿಷ್ಠ ಗುರುತ್ವ ಎಂದೂ ಕರೆಯುತ್ತೇವೆ.ಸಾಪೇಕ್ಷ ಸಾಂದ್ರತೆಯು ಕೇವಲ ಒಂದು ಸಂಖ್ಯೆಯಾಗಿದ್ದು ಯಾವುದೇ ಏಕಮಾನವನ್ನು ಹೊಂದಿರುವುದಿಲ್ಲ. ಸಾಪೇಕ್ಷ ಸಾಂದ್ರತೆಯು ಕೊಟ್ಟಿರುವ ವಸ್ತವು ನೀರಿಗಿಂತ ಎಷ್ಟು ಪಟ್ಟು ಸಾಂದ್ರವಾಗಿದೆ ಎಂಬುದನ್ನು ಹೇಳುತ್ತದೆ.

ಕೊಟ್ಟಿರುವ ವಸ್ತುವಿನ ಸಾಪೇಕ್ಷ ಸಾಂದ್ರತೆಯನ್ನು ಆ ವಸ್ತುವಿನ ಸಾಂದ್ರತೆಯನ್ನು ನೀರಿನ ಸಾಂದ್ರತೆಯಿಂದ ಬಾಗಿಸಿ ಕಂಡುಹಿಡಿಯಬಹುದು. ಎರಡು ವಸ್ತುಗಳ ಸಾಂದ್ರತೆಯ ನಡುವಿನ ಹೋಲಿಕೆಯಾಗಿದೆ. .

ವಸ್ತುವಿನ ಸಾಂದ್ರತೆ = ವಸ್ತುವಿನ ಸಾಪೇಕ್ಷ ಸಾಂದ್ರತೆ  x  ನೀರಿನ ಸಾಂದ್ರತೆ

 

ಉದಾ,

ಕಬ್ಬಿಣದ ಸಾಪೇಕ್ಷ ಸಾಂದ್ರತೆ : 8.5.

ವಸ್ತುವಿನ ಸಾಂದ್ರತೆಯು ಆ ವಸ್ತುವಿನ ಸಾಪೇಕ್ಷ ಸಾಂದ್ರತೆ ಮತ್ತು ನೀರಿನ ಸಾಂದ್ರತೆಯ ಗುಣಲಬ್ಧವಾಗಿದೆ.
ವಸ್ತುವಿನ ಸಾಂದ್ರತೆ = ವಸ್ತುವಿನ ಸಾಪೇಕ್ಷ ಸಾಂದ್ರತೆ X ನೀರಿನ ಸಾಂದ್ರತೆ .

ಸ್ಪ್ರಿಂಗ್ ತ್ರಾಸನ್ನು ವಸ್ತುವಿನ ಗುರುತ್ವ ರಾಶಿಯ ಕಂಡು ಹಿಡಿಯಲು ಬಳಸುತ್ತೇವೆ. :  ಹೂಕ್ ನಿಯಮದ ಪ್ರಕಾರ ಕೆಲಸ ಮಾಡುತ್ತದೆ, ಇದರಂತೆ ಒಂದು ನಿರ್ದಿಷ್ಟ ರಾಶಿಯನ್ನು ಸ್ಪ್ರಿಂಗ್ ನ ಒಂದು ತುದಿಯಿಂದ ತೂಗಿಬಿಟ್ಟಾಗ, ವಸ್ತುವಿನ ಗುರುತ್ವ ರಾಶಿಗೆ ಅನುಗುಣವಾಗಿ ಸ್ಪ್ರಿಂಗ್ನಲ್ಲಿ ಎಳೆತ ಉಂಟಾಗುತ್ತದೆ.

ಕಲಿಕೆಯ ಫಲಗಳು:-

  1. ರಾಶಿ, ಗಾತ್ರ ಹಾಗೂ ಸಾಂದ್ರತೆಯ ಪರಿಕಲ್ಪನೆಗಳನ್ನು ತಿಳಿದುಕೊಳ್ಳುತ್ತಾನೆ.
  2. ನೀರಿನ ಸಾಂದ್ರತೆಗಿಂತ ಹೆಚ್ಚಿನ ಸಾಂದ್ರತೆ ಇರುವ ವಸ್ತುಗಳನ್ನು ಅವುಗಳ ರಾಶಿ ಮತ್ತು ಗಾತ್ರವನ್ನು ಅಳೆಯುವುದರ ಮೂಲಕ ತಿಳಿದುಕೊಳ್ಳುತ್ತಾನೆ.

Additional information

Author

Language

Publisher

Year

Go to Top