ಸಮಾಂತರ ಸರಣಿಯ ಒಟ್ಟಾರೆ ರೋಧ

ಸರಣಿ ವಿದ್ಯುತ್  ಮಂಡಲಗಳೆಂದರೇನು ? ಎಂದು ತಿಳಿಯುವ ಮೊದಲು , ವಿದ್ಯುತ್ ಮಂಡಲಗಳೆಂದರೇನು? ಮತ್ತು ಅವುಗಳ ವಿಧಗಳಾವುವು ? ಎಂದು ತಿಳಿಯುವುದು ಅಗತ್ಯ.

Kindly register to read the book. Thank you.!

Description

ಎರಡು ರೋಧಗಳನ್ನು ಸರಣಿಯಲ್ಲಿ ಜೋಡಿಸಿದಾಗ ಉಂಟಾಗುವ ತತ್ಸಮಾನ ರೋಧವನ್ನು ನಿಶ್ಚಯಿಸುವುದು ಹೇಗೆ ?

ಪ್ರಯೋಗದ ತತ್ವ ;

ಸರಣಿ ವಿದ್ಯುತ್  ಮಂಡಲಗಳೆಂದರೇನು ? ಎಂದು ತಿಳಿಯುವ ಮೊದಲು , ವಿದ್ಯುತ್ ಮಂಡಲಗಳೆಂದರೇನು? ಮತ್ತು ಅವುಗಳ ವಿಧಗಳಾವುವು ? ಎಂದು ತಿಳಿಯುವುದು ಅಗತ್ಯ.

ವಿದ್ಯುತ್ ಮಂಡಲ :

ವಿದ್ಯುದಾವೇಶಗಳು ಸತತವಾಗಿ ಹರಿಯುತ್ತಿರುವ ವಾಹಕ ತಂತಿಯೊಂದರ ಆವೃತ ಮಂಡಲವೇ ವಿದ್ಯುತ್ ಮಂಡಲ. ಮೂಲತಃ ಇದು ವಿದ್ಯುತ್ ಆಕರ , ವಿದ್ಯುತ್ ಉಪಕರಣ ಮತ್ತು ಒಂದು ಸ್ವಿಚ್ಚನ್ನು ಒಳಗೊಂಡಿರುತ್ತದೆ.

 

ವಿದ್ಯುತ್ ಮಂಡಲಗಳನ್ನು ಅವುಗಳ ಘಟಕ ಸಂಕೇತಗಳ ಮೂಲಕ ಪ್ರತಿನಿಧಿಸುವ ನಕ್ಷೆಯೇ ಮಂಡಲ ನಕ್ಷೆ.

ವಿದ್ಯುತ್ ಮಂಡಲದ ವಿಧಗಳು

ವಿದ್ಯುತ್ ಮಂಡಲಗಳಲ್ಲಿ ಎರಡು ವಿಧ.

1 . ಸರಣಿ ವಿದ್ಯುತ್ ಮಂಡಲ

2 . ಸಮಾಂತರ ವಿದ್ಯುತ್ ಮಂಡಲ

ಸರಣಿ ರೋಧಗಳ ವಿದ್ಯುತ್ ಮಂಡಲ :

ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರೋಧಗಳನ್ನು ಒಂದರ ಪಕ್ಕ ಒಂದು ಇರುವಂತೆ , ಒಂದರ ಒಂದು ತುದಿಯನ್ನು ಇನ್ನೊಂದರ ಆರಂಭದ ತುದಿಗೆ ಜೋಡಿಸಿ ರಚಿಸಲಾಗುತ್ತದೆ.

ಸಮಾಂತರ ರೋಧಗಳ ವಿದ್ಯುತ್ ಮಂಡಲ :

ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರೋಧಗಳ ಪ್ರಾರಂಭದ ತುದಿಗಳನ್ನು ಸೇರಿಸಿ ವಿದ್ಯುದಾಕರದ ಒಂದು ಧ್ರುವಕ್ಕೂ , ಅಂತ್ಯದ ತುದಿಗಳನ್ನು ಸೇರಿಸಿ ವಿದ್ಯುದಾಕರದ ಇನ್ನೊಂದು ದ್ರುವಕ್ಕೂ ಜೋಡಿಸಿ ರಚಿಸಿದ ಮಂಡಲ.

ಸರಣಿ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹಕ್ಕೆÀ ಪಥ ಒಂದೇ ಆಗಿರುವುದರಿಂದ ರೋಧಗಳಲ್ಲಿ ಹರಿಯುವ ವಿದ್ಯುತ್ ಪ್ರವಾಹದ ಪ್ರಮಾಣ ಒಂದೇ ಆಗಿರುತ್ತದೆ . ತತ್ಸಮಾನ ರೋಧಗಳನ್ನು ಲೆಕ್ಕಾಚಾರ ಮಾಡುವ ಮೊದಲು ರೋಧ ಎಂದರೇನೆಂದು ತಿಳಿಯೋಣ .

ವಿಭವವೆಂದರೆ ವಿದ್ಯುದಾವೇಶಗಳನ್ನು ವಾಹಕದ ಮೂಲಕ ತಳ್ಳುವ ಒಂದು ವಿದ್ಯುತ್‍ಚಾಲಕ ಬಲ ಎನ್ನಬಹುದು . ಹೀಗೆ ತಳ್ಳಲು ಬೇಕಾದ ಶಕ್ತಿ ಹೆಚ್ಚಾಗಿದ್ದರೆ , ಆ ವಾಹಕದ ರೋಧ ಹೆಚ್ಚು ಎಂದು ಹೇಳಬಹುದು . ಅನೇಕ ವಸ್ತುಗಳಲ್ಲಿ ಈ ವಿಭವ ಮತ್ತು ರೋಧಗಳ ನಡುವಿನ ಸಂಬಂಧವನ್ನು ಓಮನ ನಿಯಮ ತಿಳಿಸುತ್ತದೆ .

ಓಮನ ನಿಯಮ

ಅಂದರೆ , ರೋಧವು ತನ್ನ ಮೂಲಕ ಹರಿಯುವ ವಿದ್ಯುದಾವೇಶಗಳಿಗೆ ವಾಹಕವೊಂದು ಒಡ್ಡುವ ತಡೆ.  = ವಿಭವ / ವಿದ್ಯುತ್ ಪ್ರವಾಹ

ಎಲ್ಲಾ ಲೋಹಗಳು ಉತ್ತಮ ವಾಹಕಗಳು , ಹಾಗಾಗಿ ಈ ಲೋಹಗಳ ತಂತಿಗಳು ಇತರ ವಸ್ತುಗಳಿಗೆ ಹೋಲಿಸಿದಾಗ ಸಾಮಾನ್ಯವಾಗಿ ಕಡಿಮೆ ರೋಧವನ್ನು ಹೊಂದಿರುತ್ತದೆ .

ರೋಧವು ತಂತಿಯ ಉದ್ದವನ್ನು ನೇರವಾಗಿ ಅವಲಂಬಿಸಿರುತ್ತದೆ . ತಂತಿಯ ಉದ್ದ ಜಾಸ್ತಿಯಾದರೆ ರೋಧವೂ ಜಾಸ್ತಿಯಾಗುತ್ತದೆ . ಲೋಹದ ತಂತಿಯ ಉದ್ದ ಎರಡುಪಟ್ಟು ಹೆಚ್ಚಾದರೆ ರೋಧವೂ ಎರಡುಪಟ್ಟು ಹೆಚ್ಚಾಗುತ್ತದೆ .

ಅಂದರೆ    :

ವಾಹಕದ ತಂತಿಯ ರೋಧವು ತಂತಿಯ ದಪ್ಪವನ್ನು ಅಥವಾ ಅಡ್ಡ ಸೀಳಿಕೆಯ ವಿಸ್ತೀರ್ಣ ಮೇಲೂ ಅವಲಂಬಿತವಾಗಿರುತ್ತದೆ .

ತೆಳುವಾದ ತಂತಿಯ ರೋಧವು ದಪ್ಪನಾದ ತಂತಿಯ ರೋಧಕ್ಕಿಂತ ಹೆಚ್ಚಾಗಿರುತ್ತದೆ .

ಅಂದರೆ

ತಂತಿಯ ಅಡ್ಡಸೀಳಿಕೆಯ ವಿಸ್ತೀರ್ಣ ಎರಡುಪಟ್ಟು ಹೆಚ್ಚಾದರೆ ಅದರ ರೋದವು ಅರ್ಧದಷ್ಟಾಗಿರುತ್ತದೆ . ಕೊನೆಯದಾಗಿ ವಾಹಕದ ತಂತಿಯ ರೋಧವು ತಾಪದ ಮೇಲೂ ಅವಲಂಬಿತವಾಗಿರುತ್ತದೆ . ತಾಪ ಹೆಚ್ಚಾದರೆ , ರೋಧವೂ ಹೆಚ್ಚಾಗುತ್ತದೆ .

ಸರಣಿ ವಿದ್ಯುತ್ ಮಂಡಲದಲ್ಲಿನ ಒಟ್ಟು ರೋಧವನ್ನು ( ತತ್ಸಮಾನ ರೋಧವನ್ನು ) ಕಂಡುಹಿಡಿಯುವುದು .

ಸರಣಿ ವಿದ್ಯುತ್ ಮಂಡಲದಲ್ಲಿ ಒಟ್ಟು ರೋಧವನ್ನು ಕಂಡುಹಿಡಿಯಲು ಮಂಡಲದಲ್ಲಿನ ಎಲ್ಲಾ ರೋಧಗಳ ಮೌಲ್ಯವನ್ನು ಸರಳವಾಗಿ ಕೂಡಬೇಕು . ಹೇಗೆ ಕೂಡುವುದರಿಂದ ಸಹಜವಾಗಿಯೇಒಟ್ಟು ರೋಧವು ಹೆಚ್ಚಾಗುತ್ತದೆ . ಅಂದರೆ ,

ಇಲ್ಲಿ ಮೀಟರ್ ಬ್ರಿಡ್ಜ್ ಬಳಸಿ ಸರಣಿ ವಿದ್ಯುತ್ ಮಂಡಲದಲ್ಲಿನ ಒಟ್ಟು ರೋಧವನ್ನು ನಿಖರವಾಗಿ ಕಂಡುಹಿಡಿಯಲಾಗಿದೆ . ಮೀಟರ್ ಬ್ರಿಡ್ಜ್ ಎಂಬುದು ವ್ಹೀಟ್ ಸ್ಟೋನ್ ನೆಟ್ ವರ್ಕ್ ನಿಯಮವನ್ನು ಬಳಸಿ ಒಟ್ಟುರೋಧವನ್ನು ಅಳತೆ ಮಾಡುವ ಒಂದು ಸಾಧನ .

Additional information

Author

Language

Publisher

Year

Go to Top