ಶಬ್ದ ಪ್ರತಿಫಲನದ ನಿಯಮಗಳು

ಪ್ರತಿಫಲನ ಎಂದರೇನು?

ಒಂದು ಮಾಧ್ಯಮದಲ್ಲಿ ವಸ್ತುವಿನ ಮೇಲೆ ಬಿದ್ದ ತರಂಗವು ಹಿಂತಿರುಗಿ ಅದೇ ಮಾಧ್ಯಮಕ್ಕೆ ಬರುವ ಕ್ರಿಯೆಯನ್ನು ಪ್ರತಿಫಲನ ಎನ್ನುತ್ತೇವೆ. ಉದಾಹರಣೆಗೆ ಬೆಳಕಿನ ಪ್ರತಿಫಲನ, ಶಬ್ದದ ಪ್ರತಿಫಲನ ಮತ್ತು ನೀರಿನ ತರಂಗಗಳ ಪ್ರತಿಫಲನ

ನಿಮಗೆ ಗೊತ್ತೆ ಶಬ್ದ ತನ್ನ ಆಕರದಿಂದ ಹೇಗೆ ಪ್ರಸರಣೆಯಾಗುತ್ತದೆ ಎಂದು?

ಶಬ್ದವು ಗಾಳಿಯಲ್ಲಿ ನೀಳತರಂಗಗಳಾಗಿ ಪ್ರಸರಣೆಯಾಗುತ್ತದೆ. ಗಾಳಿಯ ಗುಣಲಕ್ಷಣಗಳ ಮೂಲಕ ಶಬ್ದದ ಜವವನ್ನು ಕಂಡುಹಿಡಿಯಬಹುದು ಹೊರತಾಗಿ ಶಬ್ದದ ಆವೃತ್ತಿ ಅಥವಾ ಕಂಪನ ವಿಸ್ತಾರದಿಂದಲ್ಲ. ಒಂದು ಮೇಲ್ಮೈಗೆ ತಾಗಿದ ಶಬ್ದತರಂಗವು ಹೀರದೆ ಅಥವಾ ಚಲಿಸದೆ ಇದ್ದರೆ ಅದು ಪ್ರತಿಫಲನ ಹೊಂದುತ್ತದೆ. ಶಬ್ದ ಪ್ರತಿಫಲನದ ನಿಯಮವು ಬೆಳಕಿನ ಪ್ರತಿಫಲನ ನಿಯಮದ ರೀತಿಯೇ ಇದೆ, ಅಂದರೆ ಫಲಿತ ಕೋನದ ಅಳತೆಯು ಪ್ರತಿಫಲನ ಕೋನದ ಅಳತೆಗೆ ಸಮವಿರುತ್ತದೆ. ದರ್ಪಣದಲ್ಲಿ ಹೇಗೆ ಪಾರ್ಶ್ವಪಲ್ಲಟ ಕ್ರಿಯೆ ನಡೆಯುತ್ತದೆಯೋ ಹಾಗೆ.

ಹೇಗೆ ಶಬ್ದ ಪ್ರತಿಫಲನವನ್ನು ವಿವರಿಸಬಹುದು?

ಮಾಧ್ಯಮದಲ್ಲಿ ಚಲಿಸುತ್ತಿರುವ ಶಬ್ದ ತರಂಗಗಳು, ಮೇಲ್ಮೈಗೆ ತಾಗಿ ಮತ್ತು ಅದೇ ಮಾಧ್ಯಮದಿಂದ ಹಿಂತಿರುಗಿ ಬರುವ ಕ್ರಿಯೆಗೆ ಶಬ್ದತರಂಗದ ಪ್ರತಿಫಲನ ಎನ್ನುತ್ತೇವೆ. ಆ ತರಂಗಗಳನ್ನು ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎನ್ನುತ್ತೇವೆ.

ಆಪಾತ ಮತ್ತು ಪ್ರತಿಫಲಿತ ಶಬ್ದ ತರಂಗಗಳು ಎಂದರೇನು?

ಪ್ರತಿಫಲಕದ ಕಡೆಗೆ ಚಲಿಸುವ ಶಬ್ದ ತರಂಗಗಳನ್ನು ಆಪಾತ/ಪತನ ಶಬ್ದ ತರಂಗಗಳು ಎನ್ನುವರು. ಪ್ರತಿಫಲಕದಿಂದ ಹಿಂದಿರುವ ಶಬ್ದ ತರಂಗಗಳನ್ನು ಪ್ರತಿಫಲಿತ ಶಬ್ದ ತರಂಗಗಳು ಎನ್ನುವರು. ಪ್ರಾಯೋಗಿಕವಾಗಿ ಆಪಾತ ಬಿಂದು ಮತ್ತು ಪ್ರತಿಫಲಿತ ಬಿಂದು ಪ್ರತಿಫಲನ ಮೇಲ್ಮೈ ಮೇಲೆ ಒಂದೇ ಆಗಿರುತ್ತದೆ.

ಪತನ ಬಿಂದುವಿನಲ್ಲಿ ಎಳೆದ ಲಂಬವನ್ನು ಲಂಬ ಎನ್ನುವರು.ಶಬ್ದ ತರಂಗವು ಲಂಬದಲ್ಲಿ ಉಂಟುಮಾಡಿದ ಕೋನವನ್ನು ಆಪಾತ ಕೋನ ಎನ್ನುವರು. “i” ಲಂಬದಿಂದ ಪ್ರತಿಫಲನಗೊಂಡ ಶಬ್ದತರಂಗದ ಕೋನವನ್ನು ಪ್ರತಿಫಲನ ಕೋನ “r” ಎನ್ನುವರು.

ಫ್ರತಿಫಲನದ ನಿಯಮಗಳು

ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ.

ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ.

ಕಲಿವಿನ ಫಲಗಳು :

ವಿದ್ಯಾರ್ಥಿಗಳು ಶಬ್ದ ತರಂಗದ ಮೊದಲನೆ ಮತ್ತು ಎರಡನೆ ಪ್ರತಿಫಲನದ ನಿಯಮಗಳನ್ನು ತಿಳಿಯುತ್ತಾರೆ.

ಪ್ರತಿಫಲನದ ಮೊದಲನೆಯ ನಿಯಮ : ಪತನ ತರಂಗ, ಪ್ರತಿಫಲನ ತರಂಗ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮೈಗೆ ಎಳೆದ ಲಂಬ, ಈ ಮೂರು ಒಂದೇ ಸಮತಲದಲ್ಲಿರುತ್ತವೆ.

ಪ್ರತಿಫಲನದ ಎರಡನೆಯ : ನಿಯಮ ಪತನ ಕೋನವು ∠i ಪ್ರತಿಫಲನ ಕೋನಕ್ಕೆ∠r ಸಮವಾಗಿರುತ್ತದೆ.

Kindly register to read the book. Thank you.!

Description

ಶಬ್ದ ಪ್ರತಿಫಲನದ ನಿಯಮಗಳನ್ನು ಪರೀಕ್ಷಿಸುವುದು.

Additional information

Author

Language

Publisher

Year

Go to Top