ಮರದ ಪೆಟ್ಟಿಗೆಯನ್ನು ತಳ್ಳಲು ಬೇಕಾಗಿರುವ ಬಲ

ನ್ಯೂಟನ್ನಿನ ಎರಡನೇ ನಿಯಮದ ಪ್ರಕಾರ, ಒಂದು ಕಾಯಕ್ಕೆ ಅದರ ಮೇಲಿನ ಬಲ ಪ್ರಯೋಗದಿಂದ ನೀಡಿದ ವೇಗೋತ್ಕರ್ಷವು ಕಾಯದ ಮೇಲೆ ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಬಲ ಪ್ರಯೋಗವಾದ ದಿಕ್ಕಿನಲ್ಲಿಯು ಕಾಯದ ರಾಶಿಗೆ ವಿಲೋಮಾನುಪಾತದಲ್ಲಿಯೂ ಇರುತ್ತದೆ.

ನ್ಯೂಟನ್ನಿನ ಎರಡನೇ ನಿಯಮವು ಬಲ ಮತ್ತು ವೇಗೋತ್ಕರ್ಷಗಳ ನಡುವಿನ ಸಂಬಂಧವನ್ನು ನಿಖರವಾಗಿ ವಿವರಿಸುತ್ತದೆ.

Kindly register to read the book. Thank you.!

Description

ಮರದ ತುಂಡನ್ನು ತಳ್ಳಲು ಅವಶ್ಯಕತೆ ಇರುವ ಬಲ

ಉದ್ದೇಶ :

ಸಮತಟ್ಟಾದ ಮೇಲ್ಮೈ ಮೇಲೆ ಇರುವ ಆಯತಾಕಾರದ ಮರದ ತುಂಡಿನ ತೂಕ ಮತ್ತು ಸ್ಪ್ರಿಂಗ್ ತ್ರಾಸ್  ಸಹಾಯದಿಂದ ಅದನ್ನು ಜಾರಿಸಲು ಬೇಕಾಗಿರುವ ಕನಿಷ್ಠ ಬಲದ ನಡುವಿನ ಸಂಬಂಧವನ್ನು ಸಾಧಿಸುವುದು.

ಪಠ್ಯಭಾಗ :

ನ್ಯೂಟನ್ನಿನ ಎರಡನೇ ನಿಯಮದ ಪ್ರಕಾರ, ಒಂದು ಕಾಯಕ್ಕೆ ಅದರ ಮೇಲಿನ ಬಲ ಪ್ರಯೋಗದಿಂದ ನೀಡಿದ ವೇಗೋತ್ಕರ್ಷವು ಕಾಯದ ಮೇಲೆ ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಬಲ ಪ್ರಯೋಗವಾದ ದಿಕ್ಕಿನಲ್ಲಿಯು ಕಾಯದ ರಾಶಿಗೆ ವಿಲೋಮಾನುಪಾತದಲ್ಲಿಯೂ ಇರುತ್ತದೆ.

ನ್ಯೂಟನ್ನಿನ ಎರಡನೇ ನಿಯಮವು ಬಲ ಮತ್ತು ವೇಗೋತ್ಕರ್ಷಗಳ ನಡುವಿನ ಸಂಬಂಧವನ್ನು ನಿಖರವಾಗಿ ವಿವರಿಸುತ್ತದೆ.

‘m’ ಎನ್ನುವುದು ಕಾಯದ ರಾಶಿಯಾಗಿರಲಿ. ಅದರ ಮೇಲೆ ಪ್ರಯೋಗವಾಗುತ್ತಿರುವ ಫಲಿತ ಬಲ ‘F’ ಆಗಿರಲಿ ಮತ್ತು ಕಾಯದ ವೇಗೋತ್ಕರ್ಷವು ‘a’ ಆಗಿರಲಿ.

ವೇಗೋತ್ಕರ್ಷ α ಬಲ

F ∝ a

F ∝ m

ಆದ್ದರಿಂದ, F = kma ………… (1)

ಇಲ್ಲಿ k ಎಂಬುದು ಒಂದು ಸ್ಥಿರಾಂಕ

SI ಏಕಮಾನ, K = 1

ಆದ್ದರಿಂದ, F = ma

ನ್ಯೂಟನ್ನಿನ ಎರಡನೇ ನಿಯಮ ಪ್ರಾಮುಖ್ಯತೆ

ನ್ಯೂಟನ್ನಿನ ಎರಡನೇ ನಿಯಮವು ವಸ್ತುವಿನ ಮೇಲೆ ಪ್ರಯೋಗವಾಗುತ್ತಿರುವ ಬಲದ ಪ್ರಮಾಣವನ್ನು ತಿಳಿಸುತ್ತದೆ.

F = ma

ಎರಡನೇ ನಿಯಮದಿಂದ ಮೊದಲ ಮತ್ತು ಮೂರನೆ ನಿಯಮವನ್ನು ನಿರೂಪಿಸಬಹುದು. ಆದ್ದರಿಂದ ಈ ನಿಯಮವು ಚಲನೆಯ ಮೂಲ ನಿಯಮವಾಗಿದೆ.

ನ್ಯೂಟನ್ನಿನ ಎರಡನೇ ನಿಯಮದ ಅನ್ವಯಗಳು

ಬರ್ಫದ ತುಂಡನ್ನು ಒಡೆಯಲು

ಕ್ರಿಕೆಟ್ ಬಾಲ್ ನ್ನು ಹಿಡಿಯುವಾಗ(ಕ್ಯಾಚ್ ಹಿಡಿಯುವಾಗ )

ಎತ್ತರ ಜಿಗಿತ ಮತ್ತು ಉದ್ದ ಜಿಗಿತಗಳನ್ನು ಅಭ್ಯಸಿಸುವಾಗ

ಕಲಿವಿನ ಫಲ

ಈ ಎಲ್ಲಾ ಉದಾಹರಣೆಗಳಿಂದ ವಿದ್ಯಾರ್ಥಿಗಳು

1. ಬಲ

2. ಬಲ, ರಾಶಿ ಮತ್ತು ವೇಗೋತ್ಕರ್ಷಗಳ ನಡುವಿನ ಸಂಬಂಧ

3. ನ್ಯೂಟನ್ನಿನ ಎರಡನೇ ನಿಯಮ

ಕುರಿತು ಕಲಿಯುವರು

Additional information

Author

Language

Publisher

Year

Go to Top