show blocks helper
  • ಕನ್ನಡ ರಂಗಭೂಮಿಗೆ ನಾನು ಪದಾರ್ಪಣ ಮಾಡಿ ಆರು ದಶಕಗಳು ಜಾರಿ ಹೋಗಿವೆ. ಈ ಆರು ದಶಕಗಳ ಬಣ್ಣದ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದ್ದೇನೆ. ರಂಗಭೂಮಿಯ ಏಳುಬೀಳುಗಳನ್ನು ಕಂಡಿದ್ದೇನೆ. ಅನೇಕ ಪ್ರತಿಭಾನ್ವಿತ ಅಭಿನೇತ್ರಿಯರೂ, ಕಲಾತಪಸ್ವಿಗಳೂ ಕನ್ನಡ ರಂಗಕಲೆಯನ್ನು ಪ್ರಜ್ವಲಗೊಳಿಸಿದ್ದನ್ನು ಕಂಡಿದ್ದೇನೆ.
  • ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ 'ಅಪೇರಾ'ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

Go to Top