show blocks helper
  • 'ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲರು ಮುಸ್ಲಿಂ ಕನ್ನಡಿಗರು, ಆದರೆ ಅ.ನ.ಕೃಷ್ಣರಾಯರು ಅಚ್ಚ ಕನ್ನಡಿಗರು.
  • ಕನ್ನಡ ರಂಗಭೂಮಿಗೆ ನಾನು ಪದಾರ್ಪಣ ಮಾಡಿ ಆರು ದಶಕಗಳು ಜಾರಿ ಹೋಗಿವೆ. ಈ ಆರು ದಶಕಗಳ ಬಣ್ಣದ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದ್ದೇನೆ. ರಂಗಭೂಮಿಯ ಏಳುಬೀಳುಗಳನ್ನು ಕಂಡಿದ್ದೇನೆ. ಅನೇಕ ಪ್ರತಿಭಾನ್ವಿತ ಅಭಿನೇತ್ರಿಯರೂ, ಕಲಾತಪಸ್ವಿಗಳೂ ಕನ್ನಡ ರಂಗಕಲೆಯನ್ನು ಪ್ರಜ್ವಲಗೊಳಿಸಿದ್ದನ್ನು ಕಂಡಿದ್ದೇನೆ.
  • ಈ ಕೆಳಕಂಡ ದ್ರಾವಣಗಳಲ್ಲಿ ಒಂದು ಘನ ವಸ್ತುವನ್ನು ಸಂಪೂರ್ಣವಾಗಿ ಮುಳುಗಿಸಿದಾಗ ಘನವು ಕಳೆದುಕೊಳ್ಳುವ ತೂಕಕ್ಕೂ ಮತ್ತು ಪಲ್ಲಟವಾಗುವ ನೀರಿನ ತೂಕಕ್ಕೂ ಇರುವ ಸಂಬಂಧವನ್ನು ಸ್ಥಾಪಿಸುವುದು.
    • ನಲ್ಲಿ ನೀರು
    • ಪ್ರಬಲ ಉಪ್ಪಿನ ದ್ರಾವಣ
    ಕನಿಷ್ಠ ಎರಡು ಘನ ವಸ್ತುಗಳನ್ನು ಬಳಸಿ ಇದನ್ನು ಸಾಧಿಸಬಹುದು.
  • ವಿಭವಾಂತರದ ಜೊತೆ ವಿದ್ಯುತ್ಪ್ರವಾಹದ ಅಳತೆಗಳನ್ನು ಗ್ರಾಫ್ ಸಹಾಯದಿಂದ ಬಿಡಿಸಿ ರೋಧದ ಅಳತೆಯನ್ನು  ಸೆಂಟಿಮೀಟರ್ ಳಲ್ಲಿ ಕಂಡುಹಿಡಿಯುವುದು.
  • ದಿನವೂ ಉದಯೋನ್ಮುಖ ಕವಿಗಳು ಮತ್ತು ವಿಮರ್ಶಕರು ಮನೆಗೆ ಬರುತ್ತಿದ್ದರು. ತಾವೇ ಎಲಿಯೆಟ್‌ಗಳು ಅನ್ನೋ ಹಾಗೆ ಮಾತಾಡುತ್ತಿದ್ದರು. ನಂಗೆ ಬೌದ್ಧಿಕತೆಯ ಬಗ್ಗೆ ಜ್ಞಾನದ ಬಗ್ಗೆ ಮೋಹವಿತ್ತು.
  • ಸ್ನೇಹಿತರೇ, ಕನಕದಾಸ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರಾರಂಭ ಮಾಡಿರ‍್ತಕ್ಕಂಥ ಈ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೊದಲ ಸಮಾರಂಭದಲ್ಲಿ ಉದ್ಘಾಟಕನಾಗಿ ಭಾಷಣ ಮಾಡ್ತಿದ್ದೇನೆ.
  • ಒಂದು ಕಬ್ಬಿಣದ ಆಯತಘನವು ಮರಳಿನ ಮೇಲೆ ಉಂಟುಮಾಡುವ ಒತ್ತಡವನ್ನು ಅಧ್ಯಯನ ಹಾಗೂ ಹೋಲಿಕೆ ಮಾಡಲು ಅದರ ದ್ರವ್ಯರಾಶಿ ಮತ್ತು ತೂಕವನ್ನು ಕಂಡುಹಿಡಿಯಬೇಕು. ನೀವು ಒಂದು ವಸ್ತುವಿನ ದ್ರವ್ಯರಾಶಿಯನ್ನು ವ್ಯಾಖ್ಯಾನಿಸಬಲ್ಲರೇ ? ಒಂದು ವಸ್ತುವಿನ ದ್ರವ್ಯರಾಶಿಯು ಆ ವಸ್ತುವಿನ ಮೂಲಭೂತ ಗುಣವಾಗಿದೆ. ಆ ವಸ್ತುವಿನ ಜಡತ್ವವನ್ನು ಅಳತೆ ಮಾಡುವ ಅಂಕಿಯಾಗಿದೆ. ಆ ವಸ್ತುವಿನಲ್ಲಿರುವ ಒಟ್ಟು ದ್ರವ್ಯದ ಮೂಲಭೂತ ಅಳತೆಯಾಗಿದೆ. ದ್ರವ್ಯರಾಶಿಯ ಸಾಮಾನ್ಯ ಸಂಕೇತ ‘m’ ಮತ್ತು ಅದರ ಅಂತರಾಷ್ಟ್ರೀಯ ಏಕಮಾನ ಕಿಲೋಗ್ರಾಂಗಳು. ಪ್ರತಿನಿತ್ಯದ ಬಳಕೆಯಲ್ಲಿ ದ್ರವ್ಯರಾಶಿಯನ್ನು ತೂಕವೆಂದೂ, ಅವುಗಳ ಏಕಮಾನಗಳನ್ನು ಕಿಲೊಗ್ರಾಂಗಳೆಂದು ಪರಿಗಣಿಸುತ್ತೇವೆ. ವೈಜ್ಞಾನಿಕವಾಗಿ ತೂಕವನ್ನು ಯಾವುದೇ ವಸ್ತುವಿನಮೇಲೆ ವರ್ತಿಸುತ್ತಿರುವ ಗುರುತ್ವಾಕರ್ಷಣಾಬಲ ಎಂದು ವ್ಯಾಖ್ಯಾನಿಸಬಹುದು. ಆದರೆ ದ್ರವ್ಯರಾಶಿಯು ವಸ್ತುವಿನ ಸಹಜ ಗುಣವಾಗಿರುತ್ತದೆ.
  • ಯಾವುದೇ ಅಧ್ಯಯನಕ್ಕೂ ನಾವು ಮೊದಲು ಈ ಬದಲಾವಣೆಗಳನ್ನುಂಟು ಮಾಡುವ ಭೂವ್ಯಾಪಾರ ಕತೃಗಳ ಉತ್ಪತ್ತಿ, ಸ್ವಭಾವ ಮತ್ತು ಪ್ರಮಾಣಗಳ ಕೆಲವು ವಿಚಾರಗಳನ್ನೂ ಅದರೊಂದಿಗೆ ಈ ಕತೃಗಳು ನಡೆಸುತ್ತಿರುವ ಕಾರ್ಯಗತಿಯ ಕಾಲಾವಧಿಯ ನಿರ್ಧಿಷ್ಟ ಭಾವನೆಯನ್ನೂ ತಿಳಿದಿರಬೇಕೆಂಬುದು ಸ್ಪಷ್ಟವಾಗುತ್ತದೆ.
  • ನೋಡು ಭಗವಂತ, ನಿನ್ನ ಈ ಜಗದ ಸ್ಥಿತಿ ಏನಾಗಿದೆಯೆಂದು ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾರೆ ಮಾನವ ಸೂರ್ಯ ಬದಲಾಗಲಿಲ್ಲ, ಚಂದ್ರ ಬದಲಾಗಲಿಲ್ಲ, ಆಕಾಶ ಬದಲಾಗಲಿಲ್ಲ ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾನೆ ಮಾನವ
  • ಶಬ್ದ ಪ್ರಸಾರವಾಗಲು ಒಂದು ಮಾಧ್ಯಮದ ಅವಶ್ಯಕತೆಯಿದೆ ಶಬ್ದವು ನೀಳತರಂಗವಾಗಿ ಪ್ರಸಾರವಾಗುತ್ತದೆ ಮತ್ತು ಪ್ರಸಾರವಾಗಲು ಮಾಧ್ಯಮದ ಅವಶ್ಯಕತೆಯಿದೆ. ಶಬ್ದವು ಯಾವಾಗಲೂ ಒಂದು ಕಂಪಿಸುವ ವಸ್ತುವಿನಿಂದ ಉಂಟಾಗುತ್ತದೆ. ಶೃತಿಕವೆ, ಡೋಲು, ಘಂಟೆಗಳು, ವೀಣೆಯ ತಂತಿಗಳು ಇತ್ಯಾದಿಗಳಿಂದ ಈ ಕಂಪನಗಳು ಉಂಟಾಗುತ್ತವೆ. ಮಾನವನಲ್ಲಿ ಧ್ವನಿಯು ಧ್ವನಿತಂತುಗಳ ಕಂಪನದಿಂದ ಉಂಟಾಗುತ್ತದೆ ಮತ್ತು ಸಂಗೀತ ವಾದ್ಯಗಳಿಂದ ಶಬ್ದವು ವಾದ್ಯಗಳಲ್ಲಿ ತುಂಬಿರುವ ಗಾಳಿಯ ಕಂಪನದಿಂದ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಶಬ್ದ ಉತ್ಪತ್ತಿ ಮಾಡುವ ವಸ್ತುವಿನ ಕಂಪನಗಳು ಎಷ್ಟು ಕಡಿಮೆ ಅಥವ ಹೆಚ್ಚಾಗಿರುತ್ತವೆಂದರೆ ಮಾನವನ ಕಿವಿಗಳು ಅದನ್ನು ಗ್ರಹಿಸಲಾರವು. ಮಾನವನ ಶ್ರವಣ ಶ್ರೇಣಿಯ ಆವೃತ್ತಿಯು 20 ಹಟ್ರ್ಜ್ ನಿಂದ 20000 ಹಟ್ರ್ಜ್ ವರೆಗೆ ವ್ಯಾಪಿಸಿದೆ. 20 ಹಟ್ರ್ಜ್‍ಗಿಂತ ಕಡಿಮೆ ಆವೃತ್ತಿಯ ಶಬ್ದವನ್ನು ಅವಧ್ವನಿ ಎಂದೂ, 20000 ಹಟ್ರ್ಜ್‍ಗಿಂತ ಹೆಚ್ಚಿನ ಆವೃತ್ತಿಯುಳ್ಳ ಶಬ್ದವನ್ನು ಶ್ರವಣಾತೀತ ಧ್ವನಿ ಎಂದು ಕರೆಯುತ್ತಾರೆ. ಘಂಟಾಪಾತ್ರೆಯ ಪ್ರಯೋಗವು ಶಬ್ದ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ ಎಂದು ರುಜುವಾತುಪಡಿಸಲು ಮಾಡುವ ಸಾಮಾನ್ಯ ಪ್ರಯೋಗವಾಗಿದೆ.
  • ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಎರಡೂ ಬಲಗಳು ವಿಭಿನ್ನ ವಸ್ತುಗಳ ಮೇಲೆ ಪ್ರಯೋಗವಾಗುವುದರಿಂದ ಅವುಗಳು ತಟಸ್ಥವಾಗುವುದಿಲ್ಲ. ಆದ್ದರಿಂದ ನ್ಯೂಟನ್ನನ ಮೂರನೇ ನಿಯಮವು ಎರಡು ವಿಭಿನ್ನ ವಸ್ತುಗಳ ನಡುವಿನ ಬಲಗಳ ನಡುವಣ ನಡೆಯುವ ಪರಸ್ಪರ ಕ್ರಿಯೆಯನ್ನು ವಿವರಿಸುತ್ತದೆ.
  • ಗಾಂಧೀಜೀ ಎಂದರೆ ಒಬ್ಬ ವ್ಯಕ್ತಿಯಲ್ಲ. ಅದು ಒಂದು ಪಂಥ. ಶಿಲ್ಪದಲ್ಲಿ ಜಕಣಾಚಾರಿ ಇದ್ದ ಹಾಗೆ.
  • ನ್ಯೂಟನ್ನಿನ ಎರಡನೇ ನಿಯಮದ ಪ್ರಕಾರ, ಒಂದು ಕಾಯಕ್ಕೆ ಅದರ ಮೇಲಿನ ಬಲ ಪ್ರಯೋಗದಿಂದ ನೀಡಿದ ವೇಗೋತ್ಕರ್ಷವು ಕಾಯದ ಮೇಲೆ ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಬಲ ಪ್ರಯೋಗವಾದ ದಿಕ್ಕಿನಲ್ಲಿಯು ಕಾಯದ ರಾಶಿಗೆ ವಿಲೋಮಾನುಪಾತದಲ್ಲಿಯೂ ಇರುತ್ತದೆ. ನ್ಯೂಟನ್ನಿನ ಎರಡನೇ ನಿಯಮವು ಬಲ ಮತ್ತು ವೇಗೋತ್ಕರ್ಷಗಳ ನಡುವಿನ ಸಂಬಂಧವನ್ನು ನಿಖರವಾಗಿ ವಿವರಿಸುತ್ತದೆ.
  • ಜಗತ್ತಿನ ವೈವಿಧ್ಯಮಯ ಧರ್ಮ,ಮತಗಳು
  • ಸುಯೋಧನಾ.. ಏಳು, ಕುರುವಂಶದ ರಾಜನಾಗಿ, ಕರ್ಣನಂಥವನ ಸ್ನೇಹಕ್ಕಾಗಿ, ರಣರಂಗದಲ್ಲಿಯೇ ವೀರ ಮರಣವನ್ನಪ್ಪಿದ ನಿನ್ನೊಡನೆ ಸಗ್ಗದಲ್ಲಿ ಸಖ್ಯಕ್ಕೆ ನಿನ್ನವರಲ್ಲೊಬ್ಬರನ್ನು ಆರಸಿಕೋ. ಕುರುಕ್ಷೇತ್ರದಲ್ಲಿ ನಡೆದ ಧರ್ಮ ಯುದ್ಧದಲ್ಲಿ ಭಾಗಿಯಾದ ಯಾರಾದರೂ ಸರಿ; ನಿನ್ನಿಚ್ಛೆಯಂತೆ ನಿನ್ನೊಡನೆ ಕರೆದುಕೋ.

Go to Top